ಪಾಕ್ ಸೈನಿಕರಿಂದ ಗುಂಡಿನ ದಾಳಿ: ಬಿಎಸ್‌ಎಫ್‌ ಯೋಧ ಬಲಿ

7

ಪಾಕ್ ಸೈನಿಕರಿಂದ ಗುಂಡಿನ ದಾಳಿ: ಬಿಎಸ್‌ಎಫ್‌ ಯೋಧ ಬಲಿ

Published:
Updated:
ಪಾಕ್ ಸೈನಿಕರಿಂದ ಗುಂಡಿನ ದಾಳಿ: ಬಿಎಸ್‌ಎಫ್‌ ಯೋಧ ಬಲಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರೌಜೌರಿ ಜಿಲ್ಲೆಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನದ ಸೈನಿಕರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧನೊಬ್ಬ ಬಲಿಯಾಗಿದ್ದಾರೆ.

ಮೃತ ಯೋಧನನ್ನು ಮಣಿಪುರದ ವಿಕಾಸ್‌ ಗುರುಂಗ್ ಎಂದು ಗುರುತಿಸಲಾಗಿದೆ.

ನೌಶೆರಾ ವಲಯದಲ್ಲಿ ಗಡಿಯಿಂದ 800 ಮೀಟರ್ ಒಳಕ್ಕೆ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದೆ. ಪ್ರತಿಯಾಗಿ ಭಾರತೀಯ ಯೋಧರೂ ಗುಂಡಿನ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬಿಕಾಸ್‌ ಗುರುಂಗ್ ಅವರಿಗೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry