ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ. ರಂಗಪ್ಪಗೆ ಆಹ್ವಾನ

7

ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ. ರಂಗಪ್ಪಗೆ ಆಹ್ವಾನ

Published:
Updated:

ಮೈಸೂರು: ‘ಶಿಕ್ಷಣ ಇಲಾಖೆಯ ಸಲಹೆಗಾರರನ್ನಾಗಿ ನೇಮಕ ಮಾಡಿದರೆ 6 ತಿಂಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರುತ್ತೇನೆ. ಇದಕ್ಕೆ ಆಹ್ವಾನವೂ ಬಂದಿದೆ’ ಎಂದು ಜೆಡಿಎಸ್‌ ಮುಖಂಡ ಪ್ರೊ.ಕೆ.ಎಸ್‌.ರಂಗಪ್ಪ ಹೇಳಿದರು.

‘ಸಿಂಗಪುರ, ಜಪಾನ್‌ ಸೇರಿದಂತೆ ವಿವಿಧ ರಾಷ್ಟ್ರಗಳ ವಿಶ್ವವಿದ್ಯಾಲಯಗಳಿಗೆ ನಾನು ಶೈಕ್ಷಣಿಕ ಸಲಹೆಗಾರನಾಗಿದ್ದೇನೆ. ಅಲ್ಲಿನ ಸುಧಾರಿತ ವ್ಯವಸ್ಥೆಯನ್ನು ಬಲ್ಲೆ. ಇದರ ಆಧಾರದ ಮೇಲೆ ರಾಜ್ಯದ ಶೈಕ್ಷಣಿಕ ಸ್ಥಿತಿಗತಿ ಸುಧಾರಿಸುವಂತೆ ನನಗೆ ಆಹ್ವಾನ ಬಂದಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry