7

‘ಹೆಬ್ಬಾಳ್ಕರ ಹೇಳಿದ ‘ಸೇವೆಗೆ’ ಜಿಎಸ್‌ಟಿ ಇದೆಯೇ’

Published:
Updated:
‘ಹೆಬ್ಬಾಳ್ಕರ ಹೇಳಿದ ‘ಸೇವೆಗೆ’ ಜಿಎಸ್‌ಟಿ ಇದೆಯೇ’

ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಹಾಗೂ ಸಚಿವೆ ಜಯಮಾಲಾ ನಡುವಿನ ವಾಕ್ಸಮರ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಗಿದೆ.

‘ವರಿಷ್ಠರು ಯಾವ ಮಾನದಂಡ ಆಧರಿಸಿ ಜಯಮಾಲಾಗೆ ಸಚಿವ ಸ್ಥಾನ ನೀಡಿದ್ದಾರೋ. ಬಹುಶಃ ಅವರ ‘ಸೇವೆ’ ಪರಿಗಣಿಸಿರಬಹುದು’ ಎಂದು ಲಕ್ಷ್ಮಿ ಹೆಬ್ಬಾಳ್ಕರ ಹೇಳಿದ್ದರು. ಅದಕ್ಕೆ, ‘ಜಗತ್ತಿನಲ್ಲಿ ಎಲ್ಲ ಕಾಯಿಲೆ

ಗಳಿಗೂ ಔಷಧಗಳಿವೆ. ಆದರೆ, ಹೊಟ್ಟೆಕಿಚ್ಚಿಗೆ ಮದ್ದಿಲ್ಲ’ ಎಂದು ಜಯಮಾಲಾ ಖಾರವಾಗಿ ತಿರುಗೇಟು ನೀಡಿದ್ದರು.

ಆದರೆ, ಜಾಲತಾಣಗಳಲ್ಲಿ ಕೆಲವರು ‘ಸೇವೆ’ ಪದಕ್ಕೆ ನಾನಾ ಅರ್ಥಗಳನ್ನು ಹುಡುಕಲು ಹೊರಟಿದ್ದಾರೆ. ಮತ್ತೆ ಕೆಲವರು, ಆ ಪದವನ್ನು ಪ್ರಯೋಗಿಸಿರುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ ಅವರಿಗೆ ‘ಕುಕ್ಕರ್ರಮ್ಮ’ ಎಂದೂ ಕುಟುಕಿದ್ದಾರೆ.

‘ಜಯಮಾಲಾ ಅವರೇ. ನಿಮ್ಮ ಹತ್ತಿರ ಬುದ್ಧಿ ಭ್ರಮಣೆಗೆ ಔಷಧವಿದ್ದರೆ, ಮೊದಲು ನಿಮ್ಮ ಪಾರ್ಟಿ ಪ್ರೆಸಿಡೆಂಟ್‌ಗೆ ಕೊಡಿ’ ಎಂಬ ಒಕ್ಕಣೆಯೂ

ಟ್ವಿಟರ್‌ನಲ್ಲಿದೆ.

‘ಅಯ್ಯಯ್ಯೋ... ಈ ಅನ್ಯಾಯ ಕೇಳೋರು ಯಾರೂ ಇಲ್ವೆ? ಇಷ್ಟೆಲ್ಲ ಆದ್ಮೇಲೆ ನಮ್ಮನ್ನು ಕಾಡುತ್ತಿರುವ ಕಟ್ಟಕಡೆಯ ಪ್ರಶ್ನೆ, ಆ ಸೇವೆ ಆದರೂ ಯಾವುದು’ ಎಂದು ಶಿವಕುಮಾರ್ ಪಾಟೀಲ ಎಂಬುವರು ಟ್ವೀಟ್ ಮಾಡಿದ್ದಾರೆ.

‘ಈ ಸೇವೆ, ಯಥಾರ್ಥವೋ, ಅಪಾರ್ಥವೋ ಅಥವಾ ನಾನಾರ್ಥವೋ’ ಎಂದು ಸಿ.ಎಂ.ಪ್ರಕಾಶ್ ವ್ಯಂಗ್ಯವಾಗಿ ಕುಕ್ಕಿದ್ದಾರೆ. ನಂತರ ಅವರೇ, ‘ಈ ಸೇವೆಗೆ ಜಿಎಸ್‌ಟಿ ಇಲ್ಲ ತಾನೇ’ ಎಂದೂ ಕುಹಕವಾಡಿದ್ದಾರೆ.

‘ಹೊಟ್ಟೆಕಿಚ್ಚಿಗೆ ಮದ್ದಿಲ್ಲ’ ಹೇಳಿಕೆಯನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಶ್ರೀಹರ್ಷ ಎಂಬುವರು, ‘ಕುಕ್ಕರ್ ಒಳಗೆ ಮಸಾಲೆ ಬಿತ್ತು

ನೋಡಿ. ಇನ್ನು ಅಡುಗೆ ಫ಼ುಲ್ ರುಚಿ’ ಎಂದಿದ್ದಾರೆ.

ಪ್ರವೀಣ್ ಕೇಸರಿ ಎಂಬುವರು, ‘ಲಕ್ಷ್ಮಿ ಹೆಬ್ಬಾಳ್ಕರ ರಾಜಕೀಯಕ್ಕೆ ಬರೋ ಮೊದಲು ಕುಕ್ಕರ್ ಅಂಗಡಿಯಲ್ಲಿ ಕೆಲಸಕ್ಕಿದ್ದರು’ ಎಂದು ವ್ಯಂಗ್ಯ ಮಾಡಿ ಎಮೋಜಿ ಹಾಕಿದ್ದಾರೆ.

‘ಲಕ್ಷ್ಮಿ ಅವರು ತಾಳ್ಮೆಗೆಟ್ಟು ‘ಗಿರಿ ಕನ್ಯೆ’ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರ ದೃಷ್ಟಿಯಲ್ಲಿ ಅವರು ‘ಮತ್ಸರ ಕನ್ಯೆ’ಯಾಗಿದ್ದಾರೆ. ಸರಿಯಾದ ಪದಗಳಲ್ಲೇ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಮಂಜಸವಲ್ಲವೇ’ ಎಂದು ಸುದರ್ಶನ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry