ಸರ್ಕಾರ 5 ವರ್ಷ ಅನುಮಾನ: ಹೊರಟ್ಟಿ

7

ಸರ್ಕಾರ 5 ವರ್ಷ ಅನುಮಾನ: ಹೊರಟ್ಟಿ

Published:
Updated:
ಸರ್ಕಾರ 5 ವರ್ಷ ಅನುಮಾನ: ಹೊರಟ್ಟಿ

ಧಾರವಾಡ: ‘ಕಾಂಗ್ರೆಸ್‌ ನಾಯಕರ ಕಿರುಕುಳದಿಂದಾಗಿ ಈ ಭಾಗಕ್ಕೆ ಸಚಿವ ಸ್ಥಾನ ಕೈತಪ್ಪಿದೆ. ಅವರ ಕಿರುಕುಳ ಹೀಗೆ ಮುಂದುವರಿದರೆ, ಈ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದೂ ಅನುಮಾನ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

‘ಬೇಷರತ್ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್‌, ಈಗ ದಿನಕ್ಕೊಂದು ಬೇಡಿಕೆ ಮಂಡಿಸುತ್ತಿದೆ. ಇದರಿಂದ ಮುಕ್ತ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೇ ಲೋಕಸಭೆ ಚುನಾವಣೆ ಆಗುವವರೆಗೂ ತನ್ನನ್ನು ಮುಟ್ಟಲು ಯಾರಿಗೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಉತ್ತರ ಕರ್ನಾಟಕ ಅಭಿವೃದ್ಧಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬದ್ಧರಾಗಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry