ಸೋಮವಾರ 17–6–1968

7

ಸೋಮವಾರ 17–6–1968

Published:
Updated:
ಸೋಮವಾರ 17–6–1968

ಮಂಗಳೂರು ಬಂದರು ಅಭಿವೃದ್ಧಿಗೆ 24ಕೋಟಿ ರೂ: ಕೇಂದ್ರದ ಸಮ್ಮತಿ

ನವದೆಹಲಿ, ಜೂ. 16– ಬೃಹತ್‌ ರೇವುಗಳಿಗೆ ಸೌಲಭ್ಯ ಕೊಡಬೇಕೆಂಬ ನೀತಿಯನ್ನನುಸರಿಸಿ ಮಂಗಳೂರು ಬಂದರು ಅಭಿವೃದ್ಧಿಗೆ 24– 30 ಕೋಟಿ ರೂಪಾಯಿಗಳ ವೆಚ್ಚದ ಅಂದಾಜಿಗೆ ಕೇಂದ್ರ ಸಂಪುಟ ಸಮ್ಮತಿಸಿದೆ.

**

ಬಲವರ್ಧನೆಗೆ ಗುಪ್ತ ನಾಗಾಗಳ ಯತ್ನ: ಶಾಂತಿ ತಂಡದ ಟೀಕೆ

ಕೋಹಿಮ, ಜೂ. 16– ಕಾಲಕ್ರಮದಲ್ಲಿ ಬಲಪ್ರದರ್ಶನ ನಡೆಸಲು ಗುಪ್ತ ನಾಗಾಗಳು ಸೈನಿಕವಾಗಿ ಸುಸಜ್ಜಿತರಾಗಲು ನಾಗಾಲ್ಯಾಂಡಿನ ಕದನವಿರಾಮ ಅವಧಿಯನ್ನು ಉಪಯೋಗಿಸಿಕೊಂಡರೆ, ಶಾಂತಿಯ ಅರ್ಥ ನಿರರ್ಥಕವಾಗುತ್ತದೆ ಎಂದು ನಾಗಾಲ್ಯಾಂಡ್‌ ಶಾಂತಿ ವೀಕ್ಷಕರ ತಂಡ ಹೇಳಿದೆ.

**

ಚೀನೀ ದಾಳಿ: ಅಪರಾಧಿ ಯಾರು?

ನವದೆಹಲಿ, ಜೂ. 16– ‘ಚೀನೀಯರು 1962ರಲ್ಲಿ ಭಾರತದ ಮೇಲೆ ದಾಳಿ ನಡೆಸಿದ್ದರ ಪರಿಣಾಮವಾಗಿ ಭಾರತದಲ್ಲಿ ಪ್ರಜಾಸತ್ತೆ ಉಳಿಯಿತು’

ಈಗ ತಾನು ಪ್ರಕಟಿಸಿರುವ ‘ದಿ ಗಿಲ್ಟಿ ಮೆನ್‌ ಆಫ್‌ 1962’ (1962ರ ಅಪರಾಧಿಗಳು) ಎಂಬ ಪುಸ್ತಕದಿಂದ ಈ ಅಂಶ ವ್ಯಕ್ತಪಟ್ಟಿದೆ.

ಭಾರತದ ಅಯೂಬ್‌ ಖಾನ್‌ ಆಗಲಿದ್ದ ಹಾಗೂ ಭಾರತದ ಮಾವೋ ತ್ಸೆ ತುಂಗ್‌ ಆಗಲು ಆಸೆ– ಆಕಾಂಕ್ಷೆ ಹೊಂದಿದ್ದ ಇಬ್ಬರು ವ್ಯಕ್ತಿಗಳ ಉನ್ನತ ಜೀವನ ಗತಿಯನ್ನು ಈ ಯುದ್ಧ ಹೇಗೆ ವ್ಯರ್ಥಗೊಳಿಸಿತು ಎಂಬುದನ್ನು ಆ ಪುಸ್ತಕ ತಿಳಿಸಿದೆ.

**

ಸೈನಿಕರಿಗೆ ಗೆರಿಲ್ಲಾ ಯುದ್ಧ ತರಬೇತಿ: ಗುಪ್ತನಾಗಾ ಹಂಚಿಕೆ ಬಯಲು

ಕೋಹಿಮ, ಜೂ. 16– ನಾಲ್ಕುಸಾವಿರ ಮಂದಿ ಸೈನಿಕರನ್ನು ಗೆರಿಲ್ಲಾ ಮಾದರಿ ಯುದ್ಧದಲ್ಲಿ ತರಬೇತಿಗೊಳಿಸುವ ಗುಪ್ತ ನಾಗಾಗಳ ಯೋಜನೆ, ಬಂಡುಕೋರ ನಾಗಾಗಳು ಹಾಗೂ ಭದ್ರತಾಪಡೆಗಳ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯಿಂದ ಬೆಳಕಿಗೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry