ಮಠಕ್ಕೆ ಮರಳಿದ ಶರಣರು

7

ಮಠಕ್ಕೆ ಮರಳಿದ ಶರಣರು

Published:
Updated:
ಮಠಕ್ಕೆ ಮರಳಿದ ಶರಣರು

ಚಿತ್ರದುರ್ಗ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಶನಿವಾರ ಮಠಕ್ಕೆ ಮರಳಿದರು.

ಬೆಂಗಳೂರಿನ ಬಿಜೆಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಸಂಜೆ 6ಕ್ಕೆ ಮಠಕ್ಕೆ ಬಂದರು. ಮಠದ ಆವರಣದಲ್ಲಿ ಸೇರಿದ್ದ ಭಕ್ತರು ಶರಣರನ್ನು ಬರಮಾಡಿಕೊಂಡು ಆರೋಗ್ಯ ವಿಚಾರಿಸಿದರು.

ಹವಾಮಾನ ಬದಲಾವಣೆ ಪರಿಣಾಮ ಜೂನ್‌ 8ರಂದು ಶರಣರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ನಾಲ್ಕು ದಿನ ಚಿಕಿತ್ಸೆ ಪಡೆದು ಮಠಕ್ಕೆ ಮರಳಿದ್ದರು. ಆರೋಗ್ಯ ಸುಧಾರಿಸದೆ ಇರುವುದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry