ಜುಲೈ 3 ರಂದು ಕಟ್ಟಡ ಕಾರ್ಮಿಕರ ಪ್ರತಿಭಟನೆ

7

ಜುಲೈ 3 ರಂದು ಕಟ್ಟಡ ಕಾರ್ಮಿಕರ ಪ್ರತಿಭಟನೆ

Published:
Updated:

ಬೆಂಗಳೂರು: ಸಂಘಟಿತ ಕಾರ್ಮಿಕರ ಮಸೂದೆ ಜಾರಿ, ಪ್ರತ್ಯೇಕ ಕಾರ್ಮಿಕ ಮಂಡಳಿ ರಚನೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 3 ರಂದು ‘ಸರ್ಜಾಪುರ ಬಸ್ ನಿಲ್ದಾಣ’ದಲ್ಲಿ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದೆ.

‘ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ, ಸಾಮಾಜಿಕ ಭದ್ರತೆ ಒದಗಿಸುತ್ತಿಲ್ಲ. ಪ್ರಧಾನಮಂತ್ರಿ ಸ್ಮಾರ್ಟ್‌ಕಾರ್ಡ್‌ ಯೋಜನೆ ಜಾರಿಗೆ ತಂದರೂ ಕಾರ್ಯರೂಪಕ್ಕೆ ಬಂದಿಲ್ಲ, ವಾರಕ್ಕೊಂದು ರಜೆ ಸಿಗಬೇಕು, ಮನೆ ಕೆಲಸ ಮಾಡುವವರನ್ನು ಕಾರ್ಮಿಕ ಇಲಾಖೆ ಕಡ್ಡಾಯವಾಗಿ ನೋಂದಾಯಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಂಘದ ಅಧ್ಯಕ್ಷೆ ಕವಿತಾ ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry