6ನೇ ದಿನವೂ ಎಲ್‌ಜಿ ಕಚೇರಿ ಬಿಟ್ಟು ಕದಲದ ಕೇಜ್ರಿವಾಲ್‌

7
ದೆಹಲಿಯಲ್ಲಿ ಪರೋಕ್ಷ ರಾಷ್ಟ್ರಪತಿ ಆಡಳಿತ: ಆರೋಪ

6ನೇ ದಿನವೂ ಎಲ್‌ಜಿ ಕಚೇರಿ ಬಿಟ್ಟು ಕದಲದ ಕೇಜ್ರಿವಾಲ್‌

Published:
Updated:
6ನೇ ದಿನವೂ ಎಲ್‌ಜಿ ಕಚೇರಿ ಬಿಟ್ಟು ಕದಲದ ಕೇಜ್ರಿವಾಲ್‌

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ತಮ್ಮ ಸಂಪುಟದ ಮೂವರು ಸಹೋದ್ಯೋಗಿಗಳ ಜತೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿ ಆರಂಭಿಸಿದ ಧರಣಿ ಶನಿವಾರ ಆರನೇ ದಿನಕ್ಕೆ ಕಾಲಿಟ್ಟಿದೆ.

ಸೋಮವಾರ ಸಂಜೆಯಿಂದಲೇ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿ ನಿರೀಕ್ಷಣಾ ಕೊಠಡಿಯಲ್ಲಿ ಬಿಡಾರ ಹೂಡಿರುವ ನಾಲ್ವರು ಅಲ್ಲಿಂದ ಕದಲಿಲ್ಲ. ಅಲ್ಲಿಂದಲೇ ಟ್ವೀಟ್‌ ಮೂಲಕ ಅವರು ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೂ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಇದುವರೆಗೂ ಧರಣಿ ನಿರತರನ್ನು ಭೇಟಿಯಾಗಿಲ್ಲ. ಇದು ಆಮ್‌ ಆದ್ಮಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಮತ್ತಷ್ಟು ಕೆರಳಿಸಿದೆ.

ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.

ಪರೋಕ್ಷ ರಾಷ್ಟ್ರಪತಿ ಆಡಳಿತ: ಐಎಎಸ್‌ ಅಧಿಕಾರಿಗಳ ಪ್ರತಿಭಟನೆಯ ಮೂಲಕ ದೆಹಲಿಯಲ್ಲಿ ಪರೋಕ್ಷವಾಗಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ ಎಂದು ಕೇಜ್ರಿವಾಲ್ ಆರೋಪ ಮಾಡಿದ್ದಾರೆ.

ದೆಹಲಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಮನೆಮನೆಗೆ ತೆರಳಿ ಪ್ರಚಾರ ನಡೆಸುವುದಾಗಿ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry