ಗರುಡಾಚಾರ್‌ ಅಪ್ರಬುದ್ಧ ಮಾತು ಆಡದಿರಲಿ

7
ಮಾಜಿ ಶಾಸಕ ಆರ್‌.ವಿ.ದೇವರಾಜ್‌ ತಿರುಗೇಟು

ಗರುಡಾಚಾರ್‌ ಅಪ್ರಬುದ್ಧ ಮಾತು ಆಡದಿರಲಿ

Published:
Updated:

ಬೆಂಗಳೂರು: ‘ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಉದಯ ಬಿ.ಗರುಡಾಚಾರ್‌ ಅವರು ಅಭಿವೃದ್ಧಿಯತ್ತ ಗಮನಹರಿಸಬೇಕೇ ಹೊರತು ಅಪ್ರಬುದ್ಧ ಮಾತುಗಳನ್ನು ಆಡಬಾರದು’ ಎಂದು ಮಾಜಿ ಶಾಸಕ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್‌.ವಿ.ದೇವರಾಜ್‌ ತಿರುಗೇಟು ನೀಡಿದ್ದಾರೆ.

ಜೂನ್‌ 14ರಂದು ಪತ್ರಿಕೆಯಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಗರುಡಾಚಾರ್‌ ಅವರು ದೇವರಾಜ್‌ ವಿರುದ್ಧ ಮಾಡಿದ ಟೀಕೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ನನ್ನ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ₹ 40ರಿಂದ 50 ಕೋಟಿ ಮೊತ್ತದ ಕಾಮಗಾರಿಗಳು ಬಾಕಿ ಇದ್ದವು. ಅದರ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೆನೇ ವಿನಃ ಯಾರಿಗೂ ಬೆದರಿಕೆ ಹಾಕಿಲ್ಲ. ಎಲ್ಲ ಇಲಾಖೆ ಅಧಿಕಾರಿಗಳೂ ಒಳ್ಳೆಯ ರೀತಿ ಕಾರ್ಯನಿರ್ವಹಿಸಿದ್ದಾರೆ. ಅವರೆಲ್ಲರಿಗೂ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಇಲ್ಲವಾದಲ್ಲಿ ಕ್ಷೇತ್ರದಲ್ಲಿ ₹ 1 ಸಾವಿರ ಕೋಟಿ ಮೊತ್ತದ ಅನುದಾನ ತಂದು ಕಾಮಗಾರಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿರಲಿಲ್ಲ‘ ಎಂದಿದ್ದಾರೆ.

‘ಸಾರ್ವಜನಿಕರಿಗೆ ನೆರವಾಗುವ ದೃಷ್ಟಿಯಿಂದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಯಾವುದೇ ತಪ್ಪಿಲ್ಲ. ಅದನ್ನು ಪ್ರಶ್ನಿಸುವ ಅಧಿಕಾರವೂ ಹಾಲಿ ಶಾಸಕರಿಗೆ ಇಲ್ಲ. ಅಧಿಕಾರಿಗಳನ್ನು ಬೆದರಿಸಿ ಯಾವತ್ತೂ ರಾಜಕಾರಣ ಮಾಡಿಲ್ಲ. ಜಯಗಳಿಸಿದ ಮಾತ್ರಕ್ಕೆ ತಾವು ಸರ್ವಾಧಿಕಾರಿ ಎಂಬ ಭಾವನೆ ಶಾಸಕರಿಗೆ ಇರಬಾರದು. ಅಭಿವೃದ್ಧಿಯ ವಿಚಾರದಲ್ಲಿ ನಾನು ಅವರೊಂದಿಗೆ ಕೈಜೋಡಿಸಲು ಸಿದ್ಧನಿದ್ದೇನೆ’ ಎಂದು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry