ನಾಳೆಯಿಂದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌

7

ನಾಳೆಯಿಂದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌

Published:
Updated:

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ – 2018’ರ ಅಂತಿಮ ಸುತ್ತು ಜೂನ್‌ 18ರಿಂದ 22ರವರೆಗೆ ನಡೆಯಲಿದೆ. ‘ಸ್ಮಾರ್ಟ್‌ ವಾಹನಗಳು’ ಪರಿಕಲ್ಪನೆ ಈ ಬಾರಿಯ ತಿರುಳು.

ಮಾನವ ಸಂಪನ್ಮೂಲ ಇಲಾಖೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌, ಪರ್ಸಿಸ್ಟೆಂಟ್‌ ಸಿಸ್ಟಮ್ಸ್‌, ಐಐಟಿ ಖರಗ್‌ಪುರ್‌ ಮತ್ತು ರಾಮ್‌ಬಾಬು ಮ್ಹಾಲ್ಗಿ ಆಶ್ರಯದಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ತಾಂತ್ರಿಕ ಕ್ಷೇತ್ರದಲ್ಲಿ ಸೃಜನಶೀಲ ಹೊಂದಿದ ಯುವ ತಂತ್ರಜ್ಞರ ಪ್ರತಿಭೆ ಬೆಳಕಿಗೆ ತರಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುವಂತ ತಂತ್ರಜ್ಞಾನವನ್ನು ಈ ಮೇಳದಲ್ಲಿ ಪ್ರದರ್ಶಿಸಲು ಅವಕಾಶವಿದೆ. ಸ್ವಚ್ಛ ನೀರು, ತ್ವರಿತ ಸಂವಹನ ಸಾಧನಗಳು, ತ್ಯಾಜ್ಯ ವಿಲೇವಾರಿ, ಸ್ಮಾರ್ಟ್‌ ವಾಹನಗಳು ಇತ್ಯಾದಿ ಕ್ಷೇತ್ರಗಳ ಕುರಿತು ತಮ್ಮ ತಾಂತ್ರಿಕ ಪರಿಣತಿಯನ್ನು ಪ್ರಸ್ತುತಪಡಿಸಬಹುದು ಎಂದು ಸಂಘಟಕರು ಹೇಳಿದ್ದಾರೆ.

ಹಾರ್ಡ್‌ವೇರ್‌ ವಿಭಾಗದಲ್ಲಿ ಇದುವರೆಗೆ 4,362 ಹೊಸ ಚಿಂತನೆಗಳು ಬಂದಿವೆ. 752 ತಾಂತ್ರಿಕ ಸಂಸ್ಥೆಗಳಿಂದ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಭಾಗವಹಿಸಿದ್ದಾರೆ. ಇವರ ಪೈಕಿ 106 ತಂಡಗಳು 10 ಥೀಮ್‌ಗಳ ಅಡಿ ಸ್ಪರ್ಧೆಗೆ ಅಂತಿಮಗೊಂಡಿವೆ.

ಜೂನ್‌ 18ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಎಸ್‌ಇಆರ್‌ಸಿ ಆಡಿಟೋರಿಯಂನಲ್ಲಿ ಬೆಳಿಗ್ಗೆ 8ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry