ತೂಗು ಸೇತುವೆಯ ಮೇಲೆ ಗಿಡ

7

ತೂಗು ಸೇತುವೆಯ ಮೇಲೆ ಗಿಡ

Published:
Updated:
ತೂಗು ಸೇತುವೆಯ ಮೇಲೆ ಗಿಡ

ಬೆಂಗಳೂರು: ಕೆ.ಆರ್.ಪುರದ ಟಿನ್ ಫ್ಯಾಕ್ಟರಿ ಬಳಿ ಇರುವ ತೂಗು ಸೇತುವೆಯ ಎರಡು ಬದಿಯ ಎರಡು ಕಡೆ ನಿರ್ಮಿಸಲಾಗಿರುವ ತಡೆಗೋಡೆಗಳಲ್ಲಿ ಗಿಡ ಬೆಳೆದಿವೆ.

ದೇಶದ ಎರಡನೇ ತೂಗು (ಕೇಬಲ್ ಸ್ಟೇಯ್ಡ್) ಸೇತುವೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. 1.5 ಕಿ.ಮೀ. ಉದ್ದವಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇರುವ ಸೇತುವೆ ಮೂಲಕ ಹೊರರಾಜ್ಯಕ್ಕೆ ಪ್ರಯಾಣಿಸಬಹುದು.

ಸೇತುವೆಯ ಎರಡು ಬದಿಗಳಲ್ಲಿ ಅರಳಿ, ಬೇವಿನಮರ, ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮರಗಳು ಬೆಳೆದು ನಿಂತಿವೆ. ದಿನದಿಂದ ದಿನಕ್ಕೆ ಇದರ ಗಾತ್ರ ಹೆಚ್ಚುತ್ತಿದೆ. ಸೇತುವೆ ಶಿಥಿಲಗೊಳ್ಳುವ ಮುನ್ನ ನಿರ್ವಹಣೆ ಮಾಡಬೇಕು ಎಂದು ಸ್ಥಳೀಯರಾದ ಡಿ.ಕೆ.ದೇವೇಂದ್ರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry