ಬಹು ಅಂತಸ್ತಿನ ಪಾರ್ಕಿಂಗ್‌ ಸಂಕೀರ್ಣಕ್ಕೆ ಯೋಜನೆ

7
ತಲೆನೋವಾದ ರಸ್ತೆಬದಿ ವಾಹನ ನಿಲುಗಡೆ

ಬಹು ಅಂತಸ್ತಿನ ಪಾರ್ಕಿಂಗ್‌ ಸಂಕೀರ್ಣಕ್ಕೆ ಯೋಜನೆ

Published:
Updated:
ಬಹು ಅಂತಸ್ತಿನ ಪಾರ್ಕಿಂಗ್‌ ಸಂಕೀರ್ಣಕ್ಕೆ ಯೋಜನೆ

ಬೆಂಗಳೂರು: ಬಿಬಿಎಂಪಿಯು ನಗರದ ಎರಡು ಕಡೆಗಳಲ್ಲಿ ಬಹು ಅಂತಸ್ತಿನ ಪಾರ್ಕಿಂಗ್‌ ಸಂಕೀರ್ಣಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.

ಫ್ರೀಡಂ ಪಾರ್ಕ್‌ ಮತ್ತು ಕಿದ್ವಾಯಿ ಆಸ್ಪತ್ರೆ ಬಳಿ ಸಂಕೀರ್ಣಗಳು ತಲೆಯೆತ್ತಲಿವೆ. ಡಿಸೆಂಬರ್‌ ವೇಳೆಗೆ ಈ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನೆಲದಿಂದ ಕೆಳಗೆ ಎರಡು ತಳ ಅಂತಸ್ತು ನಿರ್ಮಾಣವಾಗಿವೆ. ಇಲ್ಲಿ 30ರಿಂದ 40 ಕಾರುಗಳನ್ನು ನಿಲ್ಲಿಸಬಹುದು. ಒಟ್ಟಾರೆ ಸಂಕೀರ್ಣದಲ್ಲಿ 1 ಸಾವಿರ ವಾಹನಗಳಿಗೆ ನಿಲುಗಡೆ ಕಲ್ಪಿಸುವ ಸೌಲಭ್ಯ ಒದಗಿಸಲಾಗುವುದು ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

ಪಾಲಿಕೆ ಈಗಾಗಲೇ ಜಯನಗರ ವಾಣಿಜ್ಯ ಸಂಕೀರ್ಣ ಮತ್ತು ಆರ್‌.ಟಿ.ನಗರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಹೊಂದಿದೆ. ಅದನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸಲಾಗುತ್ತಿದೆ.

ಅದಕ್ಕಾಗಿ ರಸ್ತೆ ಬದಿ ವಾಹನ ನಿಲ್ಲಿಸುವವರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದು ಸೇರಿದಂತೆ ಹಲವಾರು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಪಾರ್ಕಿಂಗ್‌ ಸಂಬಂಧಿಸಿ ಸ್ಪಷ್ಟವಾದ ನೀತಿ ರೂಪಿಸಬೇಕು ಎಂದು ಬಿಬಿಎಂಪಿಗೆ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್‌.ಹಿತೇಂದ್ರ ಅವರು ಪತ್ರ ಬರೆದಿದ್ದಾರೆ.

ರಸ್ತೆ ಬದಿ ಪಾರ್ಕಿಂಗ್‌ ಮಾಡಿದರೆ ಅವರಿಗೆ ಮಾಲ್‌ ಅಥವಾ ಪಾರ್ಕಿಂಗ್‌ ಸಂಕೀರ್ಣದಲ್ಲಿ ವಿಧಿಸುವುದಕ್ಕಿಂತಲೂ ಹೆಚ್ಚು ಶುಲ್ಕ ವಿಧಿಸಬೇಕು. ಮಾತ್ರವಲ್ಲ, ರಸ್ತೆ ಬದಿ ಪಾರ್ಕಿಂಗನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಅವರು ಪತ್ರದಲ್ಲಿ ಸಲಹೆ ಮಾಡಿದ್ದಾರೆ.

ನಗರದಲ್ಲಿ ಪಾರ್ಕಿಂಗ್‌ ಸಂಕೀರ್ಣಗಳನ್ನು ನಿರ್ಮಿಸಿದ್ದರೂ ರಸ್ತೆಬದಿಯೇ ವಾಹನ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಇದನ್ನು ನಿಯಂತ್ರಿಸುವುದು ಹೇಗೆ ಎಂಬುದು ಪೊಲೀಸರ ತಲೆನೋವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry