ರಜೆಯಲ್ಲಿದ್ದೆ: ಅಸೀಮಾ ಸ್ಪಷ್ಟನೆ

7

ರಜೆಯಲ್ಲಿದ್ದೆ: ಅಸೀಮಾ ಸ್ಪಷ್ಟನೆ

Published:
Updated:

ಬೆಂಗಳೂರು: ‘ಸಚಿವ ಡಿ.ಕೆ ಶಿವಕುಮಾರ್‌ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನು ತಡವಾಗಿ ಬಂದೆ ಎಂದು ವರದಿ ಮಾಡಲಾಗಿದೆ. ಆದರೆ ನಾನು ಶುಕ್ರವಾರ ರಜೆಯಲ್ಲಿದ್ದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ನೋಡಲ್‌ ಅಧಿಕಾರಿ ಅಸೀಮಾ ಬಾನು ಹೇಳಿದ್ದಾರೆ.

‘ರಮ್ಜಾನ್‌ ಹಬ್ಬದ ಕಾರಣ ಅನುಮತಿ ಪಡೆದು ರಜೆ ತೆಗೆದುಕೊಂಡಿದ್ದೆ. ಆದರೆ, ಬೋರ್ಡ್‌ ರೂಮ್‌ ಸ್ವಚ್ಛತೆ ಮಾಡಲು ಅಲ್ಲಿದ್ದ ಕಡತಗಳನ್ನು ತೆರವುಗೊಳಿಸುವ ಉದ್ದೇಶದಿಂದ ಬೆಳಿಗ್ಗೆ 10.45ರ ಸುಮಾರಿಗೆ ಆಸ್ಪತ್ರೆಗೆ ಹೋದೆ. ಆದರೆ ಸಚಿವರ ಭೇಟಿ ವಿಷಯ ನನಗೆ ಗೊತ್ತೇ ಇರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry