ಬಿ ಪ್ಯಾಕ್ ಸಲಹೆ ಕಾಲಮಿತಿಯಲ್ಲಿ ಜಾರಿಗೆ ಸಿ.ಎಂ ಸೂಚನೆ

7

ಬಿ ಪ್ಯಾಕ್ ಸಲಹೆ ಕಾಲಮಿತಿಯಲ್ಲಿ ಜಾರಿಗೆ ಸಿ.ಎಂ ಸೂಚನೆ

Published:
Updated:
ಬಿ ಪ್ಯಾಕ್ ಸಲಹೆ ಕಾಲಮಿತಿಯಲ್ಲಿ ಜಾರಿಗೆ ಸಿ.ಎಂ ಸೂಚನೆ

ಬೆಂಗಳೂರು: ‘ನಗರವನ್ನು ಪ್ಲಾಸ್ಟಿಕ್ ಹಾಗೂ ತ್ಯಾಜ್ಯಮುಕ್ತಗೊಳಿಸಲು ಹಾಗೂ ಬಿ ಪ್ಯಾಕ್ ತಂಡ ನೀಡಿರುವ ಅಭಿಪ್ರಾಯವನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಬಿ ಪ್ಯಾಕ್ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು, ಬಿ ಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಉಪಾಧ್ಯಕ್ಷ ಟಿ.ವಿ.ಮೋಹನದಾಸ್ ಪೈ, ಸಿಇಓ ರೇವತಿ ಅಶೋಕ್, ಆರ್.ಕೆ. ಮಿಶ್ರಾ, ಆನಂದ ಗುಂಡೂರಾವ್ ಅವರಿಂದ ಬೆಂಗಳೂರು ಅಭಿವೃದ್ದಿ ಕುರಿತು ಮಾಹಿತಿ ಪಡೆದರು.

ಬೆಂಗಳೂರು ಅಭಿವೃದ್ದಿಗೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳು, ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್, ವೈಟ್ ಟಾಪಿಂಗ್, ಕಸ ವಿಲೇವಾರಿ ಮತ್ತು ಮೆಟ್ರೊ ಯೋಜನೆ ಕುರಿತು ಬಿ ಪ್ಯಾಕ್ ತಂಡ ತನ್ನ ನೋಟವನ್ನು ಹಂಚಿಕೊಂಡಿತು.

ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕು. ಪೋಸ್ಟರ್, ಫ್ಲೆಕ್ಸ್ ರಹಿತವಾಗಿಸಬೇಕು, ಕಸ ವಿಲೇವಾರಿಗೆ ಆಧುನಿಕ ತಂತ್ರಜ್ಞಾನ ಬಳಸಬೇಕು ಎಂದು ತಂಡ ಒತ್ತಾಯಿಸಿತು.

'ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಜಿ.ಪರಮೇಶ್ವರ ಜೊತೆ ಚರ್ಚಿಸಿ ವಿವಿಧ ಇಲಾಖೆಗಳ  ಸಭೆ ಕರೆಯುತ್ತೇನೆ. ಅವಶ್ಯವಿರುವ ಎಲ್ಲಾ ಕಾರ್ಯಗಳನ್ನು ವರ್ಷದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಮುಖ್ಯಮಂತ್ರಿ ಕಾರ್ಯದರ್ಶಿ ಸೆಲ್ವಕುಮಾರ್ ಇದ್ದರು.

‘ಮೂರು ಜನೌಷಧಿ ಕೇಂದ್ರಕ್ಕೆ ನೆರವು’

ಬೆಂಗಳೂರು: ‘ನಗರದಲ್ಲಿ ಇನ್ನೂ ಮೂರು ಜನೌಷಧಿ ಕೇಂದ್ರಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ’ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೇಳಿದ್ದಾರೆ.

‘ಅಭಯ್‌ ಫೌಂಡೇಷನ್‌ ಆಫ್‌ ರೆಸಿಡೆನ್ಸಿಯಲ್‌ ವೆಲ್‌ಫೇರ್‌ ಅಸೋಸಿಯೇಷನ್‌’ ವತಿಯಿಂದ ಬಸವನಗುಡಿ ಕ್ಷೇತ್ರದ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಿರಿನಗರ, ವಿದ್ಯಾಪೀಠ, ಕತ್ರಿಗುಪ್ಪೆ ವಾರ್ಡ್‌ಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯುವ ಯೋಜನೆ ಇದೆ. ಸ್ಥಳೀಯ ಶಾಸಕರು ಇದಕ್ಕೆ ಉತ್ತಮ ಜಾಗ ದೊರಕಿಸಿಕೊಡಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry