ಗ್ಲ್ಯಾಸ್ಗೊ ಕಲಾ ಶಾಲೆಯಲ್ಲಿ ಬೆಂಕಿ ಅವಘಡ

4

ಗ್ಲ್ಯಾಸ್ಗೊ ಕಲಾ ಶಾಲೆಯಲ್ಲಿ ಬೆಂಕಿ ಅವಘಡ

Published:
Updated:
ಗ್ಲ್ಯಾಸ್ಗೊ ಕಲಾ ಶಾಲೆಯಲ್ಲಿ ಬೆಂಕಿ ಅವಘಡ

ಲಂಡನ್‌: ಸ್ಕಾಟ್ಲೆಂಡ್‌ನ ಪ್ರಸಿದ್ಧ ಗ್ಲ್ಯಾಸ್ಗೊ ಕಲಾ ಶಾಲೆ ಶನಿವಾರ ಬೆಂಕಿಗೆ ಆಹುತಿಯಾಗಿದೆ. ನಾಲ್ಕು ವರ್ಷಗಳ ಹಿಂದೆ ಇದರ ಕಟ್ಟಡದಲ್ಲಿ ಕಾಣಿಸಿಕೊಂಡಿದ್ದ ಸಣ್ಣ ಪ್ರಮಾಣದ ಬೆಂಕಿಯಿಂದ ಭಾಗಶಃ ನಾಶವಾಗಿತ್ತು.

20 ಅಗ್ನಿಶಾಮಕ ವಾಹನ, 120 ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಅಗ್ನಿಯ ಕೆನ್ನಾಲಿಗೆ ಸಮೀಪದ ಬೇರೆ ಕಟ್ಟಡಗಳಿಗೆ ಹರಡ

ದಂತೆ ಎಚ್ಚರವಹಿಸಿದರು.

ಶಾಲೆಯ ಕ್ಯಾಂಪಸ್‌, ನೈಟ್‌ ಕ್ಲಬ್‌ನಲ್ಲಿ ಬೆಂಕಿಯಿಂದಾಗಿ ವ್ಯಾಪಕ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಅಗತ್ಯ ಪರಿಕರಗಳು ಹಾಗೂ ಜನ

ರನ್ನು ಸ್ಥಳಾಂತರಿಸಲಾಗಿತ್ತು.

ಗ್ಲ್ಯಾಸ್ಗೊ ನಗರದ ಹೃದಯ ಭಾಗದಲ್ಲಿರುವ ಈ ಕಟ್ಟಡವನ್ನು ಪ್ರಸಿದ್ಧ ವಾಸ್ತುಶಿಲ್ಪಿ ಚಾರ್ಲ್ಸ್ ರೆನ್ನಿ ಮ್ಯಾಕಿನ್ತೋಷ್

ವಿನ್ಯಾಸಗೊಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry