7

4ನೇ ವಾರವೂ ಸೂಚ್ಯಂಕ ಏರಿಕೆ

Published:
Updated:
4ನೇ ವಾರವೂ ಸೂಚ್ಯಂಕ ಏರಿಕೆ

ಮುಂಬೈ: ದೇಶದ ಷೇರುಪೇಟೆಗಳ ಸೂಚ್ಯಂಕಗಳು ಸತತ ನಾಲ್ಕನೇ ವಾರವೂ ಏರಿಕೆಯೊಂದಿಗೆ ವಹಿವಾಟು ಅಂತ್ಯಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 178 ಅಂಶ ಏರಿಕೆ ಕಂಡು 35,622 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 74 ಅಂಶ ಹೆಚ್ಚಾಗಿ 10,817 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಸಕಾರಾತ್ಮಕ ಅಂಶಗಳ ಸದುಪಯೋಗ ಪಡಿಸಿಕೊಳ್ಳುವಲ್ಲಿ ಷೇರುಪೇಟೆಗಳು ವಿಫಲವಾಗಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೈಗಾರಿಕಾ ಪ್ರಗತಿ ಸೂಚ್ಯಂಕ ಏರಿಕೆ ಕಂಡಿರುವುದು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಂಗ್‌ ಉನ್‌ ಅವರು ಐತಿಹಾಸಿಕ ಶೃಂಗಸಭೆ ನಡೆಸಿರುವುದು ದೇಶದ ಷೇರುಪೇಟೆಗಳಲ್ಲಿ ಹೆಚ್ಚಿನ ಏರಿಕೆಯನ್ನೇನೂ ಸೃಷ್ಟಿಸಿಲ್ಲ ಎಂದು ಹೇಳಿದ್ದಾರೆ.

ನಕಾರಾತ್ಮಕ ಅಂಶಗಳು: ‌ಅಮೆರಿಕ ಫೆಡರಲ್ ರಿಸರ್ವ್‌ ಶೇ 0.25 ರಷ್ಟು ಬಡ್ಡಿದರ ಏರಿಕೆ ಮಾಡಿರುವುದರಿಂದ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿ ಸೂಚ್ಯಂಕಗಳು ಹೆಚ್ಚಿನ ಏರಿಕೆ ಕಾಣುವಲ್ಲಿ ವಿಫಲವಾಗಿವೆ.

ಚಿಲ್ಲರೆ ಮತ್ತು ಸಗಟು ಹಣದುಬ್ಬರದ ಏರಿಕೆ, ಚೀನಾ ಮತ್ತು ಅಮೆರಿಕದ ಮಧ್ಯೆ ಮತ್ತೆ ವಾಣಿಜ್ಯ ಸಮರ ಆರಂಭವಾಗುವ ಸಾಧ್ಯತೆಯು ಸೂಚ್ಯಂಕದ ಓಟಕ್ಕೆ ಕಡಿವಾಣ ಹಾಕಿದವು.

ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ ಶೇ 13.97 ರಷ್ಟು ಗರಿಷ್ಠ ಏರಿಕೆ ಕಂಡುಕೊಂಡಿತು.

ವಲಯವಾರು ಆರೋಗ್ಯಸೇವೆ, ಐ.ಟಿ, ತಂತ್ರಜ್ಞಾನ, ಗ್ರಾಹಕ ಬಳಕೆ ವಸ್ತುಗಳು ಹಾಗೂ ಎಫ್‌ಎಂಸಿಜಿ ಉತ್ತಮ ಗಳಿಕೆ ಕಂಡುಕೊಂಡವು.

ಲೋಹ, ವಿದ್ಯುತ್‌, ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್‌, ವಾಹನ ಮತ್ತು ಬ್ಯಾಕಿಂಗ್‌ ಷೇರುಗಳು ಹೆಚ್ಚಿನ ಮಾರಾಟದ ಒತ್ತಡಕ್ಕೆ ಒಳಗಾದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry