ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ವಿಮೆ ಕಂತು ಹೆಚ್ಚಳ

ಶೇ 9.6 ರಷ್ಟು ಏರಿಕೆ: ಐಆರ್‌ಡಿಎಐ ಮಾಹಿತಿ
Last Updated 19 ಜೂನ್ 2018, 14:04 IST
ಅಕ್ಷರ ಗಾತ್ರ

ನವದೆಹಲಿ: 2018ರ ಮೇ ತಿಂಗಳಿನಲ್ಲಿ ಸಾಮಾನ್ಯ ವಿಮಾ ಸಂಸ್ಥೆಗಳು ಸಂಗ್ರಹಿಸಿರುವ ಸರಾಸರಿ ಕಂತಿನ ಮೊತ್ತವು ₹ 10,516 ಕೋಟಿಗೆ ತಲುಪಿದೆ.

2017ರ ಮೇ ತಿಂಗಳಿನಲ್ಲಿ ಕಂತಿನ ಮೊತ್ತ ₹ 9,598 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಶೇ 9.6 ರಷ್ಟು ಹೆಚ್ಚಾಗಿದೆ ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಮಾಹಿತಿ ನೀಡಿದೆ.

25 ಸಾಮಾನ್ಯ ವಿಮೆ ಸಂಸ್ಥೆಗಳ ಕಂತಿನ ಮೊತ್ತ ₹ 9,022 ಕೋಟಿಯಿಂದ ₹ 9,745 ಕೋಟಿಗೆ ಶೇ 8 ರಷ್ಟು ಏರಿಕೆಯಾಗಿದೆ.

ಖಾಸಗಿ ವಲಯದ 6 ಆರೋಗ್ಯ ವಿಮೆ ಸಂಸ್ಥೆಗಳ ಕಂತಿನ ಮೊತ್ತವು ₹ 455.15 ಕೋಟಿಯಿಂದ ₹ 654.36 ಕೋಟಿಗೆ ಏರಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದ ಅಗ್ರಿಕಲ್ಚರಲ್‌ ಇನ್ಸುರನ್ಸ್‌ ಕಂಪನಿ ಆಫ್‌ ಇಂಡಿಯಾ ಮತ್ತು ಎಕ್ಸ್‌ಪೋರ್ಟ್‌ ಕ್ರೆಡಿಟ್‌ ಗ್ಯಾರೆಂಟೀಡ್‌ ಕಾರ್ಪೊರೇಷನ್ ಆಫ್‌ ಇಂಡಿಯಾ ಒಟ್ಟಾರೆ ₹ 116.70 ಕೋಟಿ ಸಂಗ್ರಹಿಸಿವೆ. 2017ರ ಮೇನಲ್ಲಿ ₹ 120.23 ಕೋಟಿ ಸಂಗ್ರಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT