ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊನಾಲ್ಡೊ ಹ್ಯಾಟ್ರಿಕ್‌ ಗೋಲು

ಸ್ಪೇನ್ ವಿರುದ್ಧ 1–1ರಿಂದ ಡ್ರಾ ಸಾಧಿಸಿದ ಪೋರ್ಚುಗಲ್; ಡೀಗೊ ಕೋಸ್ಟಾ ಮಿಂಚು
Last Updated 16 ಜೂನ್ 2018, 19:58 IST
ಅಕ್ಷರ ಗಾತ್ರ

ಸೋಚಿ (ರಾಯಿಟರ್ಸ್‌): ಫುಟ್‌ಬಾಲ್ ಪ್ರಿಯರನ್ನು ಕ್ರಿಸ್ಟಿಯಾನೊ ರೊನಾಲ್ಡೊ ನಿರಾಸೆಗೊಳಿಸಲಿಲ್ಲ. ಶುಕ್ರವಾರ ಮಧ್ಯ ರಾತ್ರಿ ಇಲ್ಲಿ ನಡೆದ ವಿಶ್ವಕಪ್‌ ಟೂರ್ನಿಯ ಸ್ಪೇನ್ ಎದುರಿನ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಅವರು ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಡೀಗೊ ಕೋಸ್ಟಾ ಅವರ ಅದ್ಭುತ ಆಟದ ನೆರವಿನಿಂದ 3–2ರಿಂದ ಸ್ಪೇನ್ ಸಮಬಲ ಸಾಧಿಸಿದ್ದ ಸಂದರ್ಭದಲ್ಲಿ ಲಭಿಸಿದ ಫ್ರೀ ಕಿಕ್ ಅವಕಾಶವನ್ನು ಸದುಪ
ಯೋಗ ಮಾಡಿಕೊಂಡ ರೊನಾಲ್ಡೊ ಈ ಬಾರಿಯ ಟೂರ್ನಿಯ ಮೊದಲ ಹ್ಯಾಟ್ರಿಕ್ ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನಾಲ್ಕನೇ ನಿಮಿಷದಲ್ಲಿ ಸ್ಪೇನ್ ತಂಡದ ಡಿಫೆಂಡರ್‌ ನಾಚೊ ಫರ್ನಾಂಡಿಸ್‌ ಅವರು ಎಸಗಿದ ತಪ್ಪಿನಿಂದ ಪೋರ್ಚುಗಲ್‌ಗೆ ಪೆನಾಲ್ಟಿ ಅವಕಾಶ ಲಭಿಸಿತು. ಇದರ ಲಾಭ ಪಡೆದ ರೊನಾಲ್ಡೊ ಪಂದ್ಯದ ಮೊದಲ ಗೋಲು ಗಳಿಸಿದರು. ಆದರೆ 24ನೇ ನಿಮಿಷದಲ್ಲಿ ಡೀಗೊ ಕೋಸ್ಟಾಚೆಂಡನ್ನು ಗುರಿ ಮುಟ್ಟಿಸಿ ಸಮಬಲ ಸಾಧಿಸಿದರು.

44ನೇ ನಿಮಿಷದಲ್ಲಿ ರೊನಾಲ್ಡೊ ಮತ್ತೊಂದು ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಜಿದ್ದಿಗೆ ಬಿದ್ದಂತೆ ಆಡಿದ ಡೀಗೊ ಕೋಸ್ಟ 55ನೇ ನಿಮಿಷದಲ್ಲಿ ಸ್ಪೇನ್‌ಗೆ ಸಮಬಲದ ಗೋಲು ಗಳಿಸಿಕೊಟ್ಟರು. 58ನೇ ನಿಮಷದಲ್ಲಿ ನಾಚೊ ಗಳಿಸಿದ ಗೋಲಿನ ಬಲದೊಂದಿಗೆ ಸ್ಪೇನ್ ಮುನ್ನಡೆ ಸಾಧಿಸಿ ಕೇಕೆ ಹಾಕಿತು. ಆದರೆ ಆ ತಂಡದ ಸಂಭ್ರಮಕ್ಕೆ 88ನೇ ನಿಮಿಷದಲ್ಲಿ ತಣ್ಣೀರೆರಚಿದ ರೊನಾಲ್ಡೊ ಗ್ಯಾಲರಿಗಳಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT