ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಿಗೆ ಫುಟ್‌ಬಾಲ್‌ ಕಲಿಸುವುದೇ ನನಗೆ ಖುಷಿ’

Last Updated 16 ಜೂನ್ 2018, 19:58 IST
ಅಕ್ಷರ ಗಾತ್ರ

–ಅರ್ಜುನ್‌ ಗಣೇಶ್‌

ಸೋಚಿ: ‘ಹೊರಗಡೆ ಹೋದಾಗಲೆಲ್ಲ ಜನರು ನನ್ನನ್ನು ಗುರುತಿಸುತ್ತಾರೆ. ಅದರಲ್ಲೂ ಮಕ್ಕಳು ವಿಶೇಷ ಪ್ರೀತಿ ವ್ಯಕ್ತ‍ಪಡಿಸುತ್ತಾರೆ. ಇದೇ ಕಾರಣಕ್ಕೆ ಮಕ್ಕಳಿಗೆ ಫುಟ್‌ಬಾಲ್‌ ಹೇಳಿಕೊಡುತ್ತೇನೆ. ಅದು ನನಗೆ ಖುಷಿ ನೀಡುವ ಕೆಲಸ’ – ರಷ್ಯಾದ ಹಿರಿಯ ಫುಟ್‌ಬಾಲ್‌ ಆಟಗಾರ ಅಲೆಕ್ಸಾಂಡರ್‌ ಪನೋವ್‌ ಅವರ ಮಾತುಗಳಿವು. ಇಲ್ಲಿನ ಫಿಶ್ತ್‌ ಕ್ರೀಡಾಂಗಣದಲ್ಲಿ ಜೂನ್‌ 18ರಂದು ನಡೆಯುವ ಬೆಲ್ಜಿಯಂ ಹಾಗೂ ಪನಾಮಾ ನಡುವಣ ಪಂದ್ಯವನ್ನು ವೀಕ್ಷಿಸಲು ಅವರು ಇಲ್ಲಿಗೆ ಬಂದಿಳಿದಿದ್ದಾರೆ.

ಇದೇ ವೇಳೆ ಮಾತಿಗೆ ಸಿಕ್ಕ ಪನೋವ್‌, ‘ಫುಟ್‌ಬಾಲ್‌ಗೆ ವಿದಾಯ ಹೇಳಿದ ಮೇಲೆ ಮಕ್ಕಳಿಗೆ ಈ ಕ್ರೀಡೆಯ ಸೊಬಗನ್ನು ಕಲಿಸುತ್ತೇನೆ. ನಾವು ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಕಲಿಸುವುದು ಮುಖ್ಯ’ ಎಂದು ಅಭಿಪ್ರಾಯಪಟ್ಟರು.

ಅಲೆಕ್ಸಾಂಡರ್‌ ಅವರು ಹಲವು ವರ್ಷಗಳ ಕಾಲ ರಷ್ಯಾ ತಂಡದಲ್ಲಿ ಆಡಿದ್ದರು. 2000ರ ಯುರೋ ಕಪ್‌ನ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್‌ ತಂಡದ ವಿರುದ್ಧ ರಷ್ಯಾ 3–2 ಗೋಲುಗಳಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ಅಲೆಕ್ಸಾಂಡರ್‌ ಅವರು ನಿರ್ಣಾಯಕ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT