ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಗ್ರಾಮಸ್ಥರು

ಲಾಡ್ಲಾಪುರದಲ್ಲಿ ಫ್ಲೋರೈಡ್‌ಯುಕ್ತ ನೀರು ಪೂರೈಕೆಯಿಂದ ಅನಾರೋಗ್ಯ ಉಲ್ಬಣ
Last Updated 17 ಜೂನ್ 2018, 8:06 IST
ಅಕ್ಷರ ಗಾತ್ರ

ವಾಡಿ: ಸಮೀಪದ ಲಾಡ್ಲಾಪುರ ಗ್ರಾಮಸ್ಥರಿಗೆ ಅಶುದ್ಧ, ಲವಣಯುಕ್ತ, ಫ್ಲೋರೈಡ್ ಅಂಶ ಹೊಂದಿರುವ ನೀರು ಸೇವನೆ ಅನಿವಾರ್ಯವಾಗಿದೆ. ನಲ್ಲಿ ಮೂಲಕ ಸಾರ್ವಜನಿಕರಿಗೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿದ್ದರೂ ಗ್ರಾಮ ಪಂಚಾಯಿತಿ ಮಾತ್ರ ಜನರ ಆರೋಗ್ಯ ಕುರಿತು ಕಾಳಜಿ ವಹಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಫ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಈಗಾಗಲೇ ಗ್ರಾಮಸ್ಥರು ಕಿಡ್ನಿ ಹರಳು ಸಮಸ್ಯೆ, ಹಿರಿಯರಿಗೆ ಮೊಣಕಾಲು ನೋವು, ತೀವ್ರ ಅಶಕ್ತತೆ ಯಿಂದ ಬಳಲುತ್ತಿದ್ದಾರೆ. ಪಾತ್ರೆಗಳಲ್ಲಿ ನೀರು ಸಂಗ್ರಹಿಸಿಟ್ಟರೆ ನೀರಿನ ಮೇಲೆ ತೆಳುವಾದ ಪದರ ಸೃಷ್ಟಿಯಾಗುತ್ತದೆ.

’ನೀರು ಸೇವಿಸಲು ಯೋಗ್ಯವಾಗಿಲ್ಲ. ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಅನಾ ರೋಗ್ಯಕ್ಕೆ ಗುರಿಯಾಗ ಬೇಕಾಗುತ್ತದೆ’ ಎಂದು ಸ್ಥಳೀಯರಾದ ಶರಣಪ್ಪ ಗೊಡಗ ಜಲ ಮಂಡಳಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಗ್ರಾಮದಲ್ಲಿ 4 ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆ ಯಾಗಿರುವುದು ವಿಪರ್ಯಾಸವಾಗಿದೆ.

’ಒಂದೂವರೆ ವರ್ಷದಲ್ಲಿ ನಮ್ಮ ಮನೆಯಲ್ಲಿ ಮೂವರಿಗೆ ಕಿಡ್ನಿಸ್ಟೋನ್ ಸಮಸ್ಯೆ ಕಾಣಿಸಿಕೊಂಡಿದೆ. ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ನೀರು ಕುಡಿಯಲು ಭಯವಾಗುತ್ತಿದೆ, ಆತಂಕದಲ್ಲಿ ಕಾಲ ದೂಡುವಂತಾಗಿದೆ’ ಎನ್ನುತ್ತಾರೆ ಗ್ರಾಮಸ್ಥ
ಸಾಬಣ್ಣ ಗಂಜಿ.

ಶುದ್ಧ ಕುಡಿಯುವ ನೀರು ಒದಗಿಸಲು ಪಂಚಾಯಿತಿ ಆಡಳಿತ ಮುತುವರ್ಜಿ ವಹಿಸಬೇಕು ಎನ್ನುವುದು ಸ್ಥಳೀಯರ
ಬೇಡಿಕೆಯಾಗಿದೆ.

ಕೊಳವೆಬಾವಿಗಳ ನೀರನ್ನು ಪರೀಕ್ಷೆ ಮಾಡಿಸಲಾಗುವುದು. ಪ್ಲೋರೈಡ್ ಅಂಶ ಕಂಡು ಬಂದರೆ ಕುಡಿಯಲು ಪರ್ಯಾಯ ನೀರಿನ ವ್ಯವಸ್ಥೆಗೆ ಚರ್ಚಿಸಲಾಗುವುದು
ಗುರುನಾಥರೆಡ್ಡಿ,  ಪಿಡಿಒ, ಲಾಡ್ಲಾಪುರ

ಸಿದ್ದರಾಜ ಎಸ್ ಮಲಕಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT