ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಪಂಥೀಯ ಬುದ್ಧಿಜೀವಿಗಳು ಹಿಂದುತ್ವ ಚಿಕ್ಕದು ಮಾಡುತ್ತಿದ್ದಾರೆ : ಅನಂತಕುಮಾರ್‌ ಹೆಗಡೆ

Last Updated 17 ಜೂನ್ 2018, 8:55 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದುತ್ವವನ್ನು ಚಿಕ್ಕದು ಮಾಡುವ ಎಡಪಂಥೀಯ ಬುದ್ದಿಜೀವಿಗಳ ಪ್ರಯತ್ನವನ್ನು ತಡೆಯಬೇಕಿದೆ. ಎಲ್ಲವನ್ನು ಒಪ್ಪಿಕೊಂಡಿರುವುದರಿಂದ ನಾವು ಹಿಂದೂಗಳು’ ಎಂದುಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.‌

ಸಮೃದ್ಧ ಸಾಹಿತ್ಯವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾವರ್ಕರ್ ಅವರ 'ಹಿಂದುತ್ವ' ಅನುವಾದ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸತ್ಯವನ್ನು ಒಪ್ಪಿಗೊಳ್ಳುವುದು ಹಿಂದುತ್ವ. ಜಾತಿಯಿಂದ ಈ ದೇಶ ದೊಡ್ಡದಾಗಿಲ್ಲ. ಹಿಂದುತ್ವ ವಾದಿಗಳು ಅದಕ್ಕೆ ಯಾವತ್ತು ಒತ್ತು ನೀಡಿಲ್ಲ. ಶ್ರೇಷ್ಠ ವಿಚಾರ ಎಲ್ಲಿಂದ ಬಂದರೂ ಸ್ವೀಕರಿಸುವುದು ಹಿಂದುತ್ವ’ ಎಂದು ಹೇಳಿದರು.

‘ಹಿಂದುತ್ವ ರಾಜಕಾರಣದ ದಾಳವಲ್ಲ. ಇದು ನಮ್ಮ ಬದುಕು. ಕೆಟ್ಟ ಕೆಲಸವನ್ನು ದೂಷಿಸುವವನು ಹಿಂದೂ. ಹಲವರು ಹಿಂದುತ್ವ ನಾನಾ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ, ಏನೇ ಹೇಳಿದರೂ ಹಿಂದುತ್ವ ಎನ್ನುವುದು ಜಗತ್ತಿನ ಅದ್ಭುತ ಜೀವನ ಶೈಲಿ’ ಎಂದರು.

ಪುಸ್ತಕದ ಬೆಲೆ ₹ 110. ಬಿಡುಗಡೆಗೂ ಮುನ್ನ ಈ ಪುಸ್ತಕ ಎರಡನೇ ಮುದ್ರಣ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT