ಎಂಐಎಫ್‍ಎಸ್‍ಇಯಿಂದ ‘ಸುರಕ್ಷತಾ ಶಿಕ್ಷಣ’

7

ಎಂಐಎಫ್‍ಎಸ್‍ಇಯಿಂದ ‘ಸುರಕ್ಷತಾ ಶಿಕ್ಷಣ’

Published:
Updated:
ಎಂಐಎಫ್‍ಎಸ್‍ಇಯಿಂದ ‘ಸುರಕ್ಷತಾ ಶಿಕ್ಷಣ’

ತಾಂತ್ರಿಕತೆ ಬೆಳೆದಂತೆ ಎಲ್ಲ ಕ್ಷೇತ್ರಗಳಲ್ಲೂ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ 50ಕ್ಕಿಂತ ಅಧಿಕ ಮಂದಿ ದುಡಿಯುತ್ತಿದ್ದರೆ ಅಂತಹ ಸಂಸ್ಥೆಗಳಲ್ಲಿ ಸುರಕ್ಷತಾ ಅಧಿಕಾರಿಯ ನೇಮಕ ಮಾಡಬೇಕು ಎಂಬ ಆದೇಶ ಕೂಡಾ ಇದೆ. ‘ಅವಘಡ ಸಂಭವಿಸುವ ಮೊದಲೇ ಮುಂಜಾಗ್ರತೆ’ ಎಂಬ ಪರಿಕಲ್ಪನೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಹಿಂದೆಯೇ ಇತ್ತು. ಇದೀಗ ಈ ವ್ಯವಸ್ಥೆ ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತದಲ್ಲೂ ಬರುತ್ತಿದೆ. ಇದರಿಂದಾಗಿ ಸುರಕ್ಷತಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ದೊರೆತಿದೆ.

ಸುರಕ್ಷತಾ ಕ್ಷೇತ್ರದಲ್ಲಿ ವ್ಯವಸ್ಥಿತ ಶಿಕ್ಷಣದ ಕೊರತೆ ಇತ್ತು. ಇದರಿಂದಾಗಿ ಸುರಕ್ಷತಾ ಕ್ಷೇತ್ರಕ್ಕೆ ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿತ್ತು. ಸುರಕ್ಷತೆಯ ಬಗ್ಗೆ ಮಾಹಿತಿ ಇಲ್ಲದ ವ್ಯಕ್ತಿಯನ್ನು ಸುರಕ್ಷತಾ ಅಧಿಕಾರಿಯಾಗಿ ಕಾನೂನಿಗಾಗಿ ನೇಮಕ ಮಾಡುತ್ತಿದ್ದರು. ಆದರೆ ವಿಶ್ವದಾದ್ಯಂತ ನಡೆದ ಹಲವು ದುರಂತಗಳಿಂದಾಗಿ ಅವಘಡವನ್ನು ತಪ್ಪಿಸಲು ಇದೀಗ ಈ ಕ್ಷೇತ್ರದಲ್ಲಿನ ಶಿಕ್ಷಣ ಪಡೆದ ಮಾನವ ಸಂಪನ್ಮೂಲವನ್ನೇ ನೇಮಿಸಲಾಗುತ್ತಿದೆ.

ಸುರಕ್ಷತಾ ಕ್ಷೇತ್ರ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಅಗ್ನಿ ಅವಘಡ. ಆದರೆ ಅಗ್ನಿ ಅವಘಡ ಎಂಬುದು ಕೇವಲ ಸುರಕ್ಷತಾ ಕ್ಷೇತ್ರದ ಒಂದು ಭಾಗ ಮಾತ್ರ. ಸುರಕ್ಷತಾ ಕ್ಷೇತ್ರದ ಪಠ್ಯ ವಿಷಯವನ್ನು ಪರಿಶೀಲನೆ ನಡೆಸಿದಾಗ ವ್ಯಾಪ್ತಿ ಅರಿವಿಗೆ ಬರುತ್ತದೆ.

ಸಂಸ್ಥೆಗೆ ಮಾನ್ಯತೆ: ಸುರಕ್ಷತಾ ಕ್ಷೇತ್ರದಲ್ಲಿ ಕೇವಲ ಡಿಪ್ಲೊಮಾ ಕೋರ್ಸ್‌ಗಳು ಇದ್ದವು. ಇದೀಗ ಮಂಗಳೂರಿನ ಎಂಐಎಫ್‍ಎಸ್‍ಇ ಸಂಸ್ಥೆಯು ಸುರಕ್ಷತಾ ಕ್ಷೇತ್ರದ ಶಿಕ್ಷಣಕ್ಕೆ ಹೊಸ ವ್ಯಾಖ್ಯಾನ ಬರೆದಿದೆ. ಮಂಗಳೂರು, ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದ 12 ರಿಂದ 14 ವಿವಿಧ ಕೋರ್ಸ್‌ಗಳು ಇವೆ. ಅತ್ಯುತ್ತಮ ಪ್ರಾಧ್ಯಾಪಕರ ತಂಡ ಇದೆ. ಡಿಜಿಟಲ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಎಂಐಎಫ್‍ಎಸ್‍ಇ ಡಿಜಿಟಲ್ ಪರದೆಯ ಮೂಲಕ ತರಗತಿ ನೀಡುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್, ಇ-ಪಠ್ಯ ಪುಸ್ತಕ, ಎಲ್ಲ ಕೋರ್ಸ್‌ಗಳ ಮಲ್ಟಿ ಮೀಡಿಯಾ ವಿಡಿಯೊ ಒದಗಿಸುತ್ತಿದೆ. ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರದೆ ಈ ಕೋರ್ಸ್ ಕಲಿಯುವ ವಿದ್ಯಾರ್ಥಿಗಳನ್ನು ಕಾರ್ಖಾನೆಗಳಿಗೆ ಕರೆದುಕೊಂಡು ಹೋಗಿ ಅವರಿಗೆ ಪ್ರತ್ಯಕ್ಷ ಅನುಭವವನ್ನು ದೊರಕಿಸಿಕೊಡಲಾಗುತ್ತದೆ.

ಐಎಸ್‍ಓ 9001: 2015 ಪ್ರಮಾಣೀಕೃತ ಸಂಸ್ಥೆಯಲ್ಲಿ, ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ನಿಗದಿಪಡಿಸಿದ ಪಠ್ಯಕ್ರಮ ಆಳವಡಿಸಲಾಗಿದೆ. ವಿವಿಯ ಬೋರ್ಡ್ ಆಫ್ ಎಕ್ಸಾಮೀನರ್ ಮೂಲಕ ಪರೀಕ್ಷೆ ನಡೆಸುವುದರೊಂದಿಗೆ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ ನೀಡುತ್ತಿದೆ. ಇದರಿಂದಾಗಿ ಇಲ್ಲಿನ ಶಿಕ್ಷಣಕ್ಕೆ ವಿಶ್ವದಾದ್ಯಂತ ಮಾನ್ಯತೆ ದೊರೆತಿದೆ.

ಹಲವು ಗೌರವ: ವಿದ್ಯಾರ್ಥಿಗಳ ಏಳಿಗೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನಿರ್ಮಿಸಿದ ದಾಖಲೆ ಗುರುತಿಸಿ, ಎಂಐಎಫ್‍ಎಸ್‍ಇಗೆ 2015ರಲ್ಲಿ ಏಷ್ಯಾ ಎಜುಕೇಶನ್ ಅವಾರ್ಡ್ ನೀಡಲಾಯಿತು. ಭಾರತದಲ್ಲಿ ಸುಮಾರು 230 ಸೇಫ್ಟಿ ವಿದ್ಯಾಸಂಸ್ಥೆಗಳಿದ್ದು, ಅವೆಲ್ಲಕ್ಕಿಂತ ಮಿಗಿಲಾದ ವಿದ್ಯಾಕ್ಷೇತ್ರದ ನಾನಾ ಸಾಧನೆ ಗುರುತಿಸಿ 2015ರಲ್ಲಿ ಏಷ್ಯಾ ಎಜುಕೇಶನ್ ಸಮಾರಂಭದಲ್ಲಿ ಎಂಐಎಫ್‍ಎಸ್‍ಇಗೆ ಸನ್ಮಾನದೊಂದಿಗೆ ಭಾರತದ ನಂ 1 ಸೇಫ್ಟಿ ವಿದ್ಯಾಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಸುರಕ್ಷತಾ ಕೌನ್ಸಿಲ್‌ನ ಕಾರ್ಪೊರೇಟ್‌ ಸದಸ್ಯತ್ವ ಪಡೆದಿದೆ.

ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಮೊ.ಸಂ. 7022289933 ಅಥವಾ www.mifse.com ಗೆ ಸಂಪರ್ಕಿಸಬಹುದು.

ವಿದ್ಯಾರ್ಥಿಗಳಿಗೆ ತರಬೇತಿ

ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ವಿಷಯಗಳಿಗೆ ಸೀಮಿತವಾಗಿರಬಾರದು ಎಂಬ ಉದ್ದೇಶದಿಂದ ತರಬೇತಿ ನೀಡಲಾಗುತ್ತದೆ. ಮಾತ್ರವಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ 3 ತಿಂಗಳ ಇಂಟರ್ನ್‌ಶಿಪ್‌ಗೆ ಕಳುಹಿಸಲಾಗುತ್ತಿದೆ. ಈ ವರ್ಷ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದೇಶದಲ್ಲೂ ಇಂಟರ್ನ್‌ಶಿಪ್ ಅವಕಾಶ ದೊರೆತಿದೆ. ಇದರೊಂದಿಗೆ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಅವರಿಗೆ ಒಂದು ತಿಂಗಳ ಬ್ರಿಡ್ಜ್ ಕೋರ್ಸ್ ನೀಡಲಾಗುತ್ತದೆ.

ಔದ್ಯೋಗಿಕ ಕ್ಷೇತ್ರದಲ್ಲಿ ಅವಶ್ಯಕತೆ ತಿಳಿದುಕೊಳ್ಳಲು ದೇಶದ ನಾನಾ ಭಾಗದಲ್ಲಿರುವ ಸಂಸ್ಥೆಯ 14 ಶಾಖೆಗಳನ್ನು ಹೊಂದಿದೆ. ಮಂಗಳೂರು, ಉಡುಪಿ, ಬೆಂಗಳೂರು(ಮಲ್ಲೇಶ್ವರಂ, ಬನಶಂಕರಿ), ಮೈಸೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಕಲಬುರ್ಗಿ, ಹೊಸಪೇಟೆ, ತುಮಕೂರು, ಬೆಳಗಾವಿ, ಮಹಾರಾಷ್ಟ್ರದ ಮುಂಬೈ ಮತ್ತು ವಾಸಿ ನಗರಗಳಲ್ಲೂ ಕೂಡ ಈ ಸಂಸ್ಥೆಯ ವ್ಯಾಪ್ತಿ ಹರಡಿದೆ. ಆಯಾಯ ನಗರಗಳಲ್ಲಿರುವ ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆದು ಸಂಸ್ಥೆ ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ಷೇತ್ರದಲ್ಲಿ ವಿವಿಧ ಕೋರ್ಸ್‌ಗಳನ್ನು ನೀಡುತ್ತಿದೆ. ಭಾರತದೆಲ್ಲೆಡೆ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗಾಗಿ ಒಂದು ವಾರದ ವಿಶೇಷ ಪ್ರಾಯೋಗಿಕ ತರಬೇತಿಯನ್ನು ಮಂಗಳೂರಿನ ಕ್ಯಾಂಪಸ್‌ನಲ್ಲಿ ನೀಡಲಾಗುತ್ತದೆ.

ಮಹಿಳೆಯರಿಗೂ ಆದ್ಯತೆ

ಸೇವಾ ಕ್ಷೇತ್ರದಲ್ಲಿ ಸುರಕ್ಷತೆ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವ ಈ ಕಾಲಘಟ್ಟದಲ್ಲಿ ಪರಿಣತ ಮಹಿಳಾ ಸುರಕ್ಷತಾ ಅಧಿಕಾರಿಗಳ ಹೆಚ್ಚಿನ ಅವಶ್ಯಕತೆ ಇದೆ.

ಆಸ್ಪತ್ರೆ, ಐಟಿ ಕಂಪನಿಗಳು, ಹೋಟೆಲ್, ವಿದ್ಯಾ ಸಂಸ್ಥೆಗಳು ಸೇರಿದಂತೆ ಸೇವಾ ಕ್ಷೇತ್ರಗಳಲ್ಲಿ ಮಹಿಳಾ ಸುರಕ್ಷತಾ ಅಧಿಕಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಡಿಪ್ಲೊಮಾ ಇನ್ ಸೇಫ್ಟಿ ಆಫ್ ಸರ್ವೀಸ್ ಇಂಡಸ್ಟ್ರಿ ಎಂಬ ಹೊಸ ಕೋರ್ಸ್ ಅನ್ನು ಆರಂಭಿಸಿದ್ದು, ಇದು ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು, ಮಹಿಳಾ ಸಶಕ್ತೀಕರಣಕ್ಕೆ ಪೂರಕವಾಗಿದೆ.

ಲಭ್ಯ ಕೋರ್ಸ್‌ಗಳು

ದೇಶದಾದ್ಯಂತ ಇರುವ ಎಲ್ಲ ಎಂಐಎಫ್‍ಎಸ್‍ಇ ಕೇಂದ್ರದಲ್ಲೂ ಈ ಕೋರ್ಸ್‌ಗೆ ಪ್ರವೇಶ ಪ್ರಕ್ರೀಯೆ ಈಗಾಗಲೇ ಆರಂಭಗೊಂಡಿದೆ. ಈ ಬಾರಿ ಬಿಬಿಎ - ಇಂಡಸ್ಟ್ರಿ ಆ್ಯಂಡ್ ಕನ್‌ಸ್ಟ್ರಕ್ಷನ್ ಸೇಫ್ಟಿ ಮ್ಯಾನೇಜ್‌ಮೆಂಟ್ ಎಂಬ ಪದವಿ ಶಿಕ್ಷಣ ಆರಂಭಿಸಿದೆ. ಕುವೆಂಪು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಪದವಿ ಶಿಕ್ಷಣವನ್ನು ನೀಡಲಾಗುತ್ತಿದೆ.

ಇದರೊಂದಿಗೆ ಒಂದು ವರ್ಷದ ಡಿಪ್ಲೊಮಾ, ಪಿಜಿ ಡಿಪ್ಲೊಮಾ, ಸ್ನಾತಕೋತ್ತರ ಶಿಕ್ಷಣ ಸೇಫ್ಟಿ ಕ್ಷೇತ್ರದಲ್ಲಿ ಕಲಿಯುವ ಅವಕಾಶವನ್ನು ಈ ಸಂಸ್ಥೆ ಒದಗಿಸುತ್ತಿದೆ.

ಡಿಪ್ಲೊಮಾ ಇನ್ ಫೈರ್ ಆಂಡ್ ಸೇಫ್ಟಿ ಎಂಜಿನಿಯರಿಂಗ್, ಪಿಜಿ ಡಿಪ್ಲೊಮಾ ಇನ್ ಫೈರ್ ಆಂಡ್ ಸೇಫ್ಟಿ ಎಂಜಿನಿಯರಿಂಗ್, ಡಿಪ್ಲೊಮಾ ಇನ್ ಫೈರ್ ಆಂಡ್ ಇಂಡಸ್ಟ್ರಿಯಲ್ ಸೇಫ್ಟಿ, ಡಿಪ್ಲೊಮಾ ಇನ್ ಏರೋನಾಟಿಕಲ್ ಆಂಡ್ ಮರೈನ್ ಸೇಫ್ಟಿ, ಪಿಜಿ ಡಿಪ್ಲೊಮಾ ಇನ್ ಏರೋನಾಟಿಕಲ್ ಆಂಡ್ ಮರೈನ್ ಸೇಫ್ಟಿ, ಡಿಪ್ಲೊಮಾ ಇನ್ ಹೆಲ್ತ್ ಸೇಫ್ಟಿ, ಎನ್ವಿರಾನ್‌ಮೆಂಟ್, ಡಿಪ್ಲೊಮಾಇನ್ ಇಂಡಸ್ಟ್ರಿಯಲ್ ಆಂಡ್ ಕನ್‌ಸ್ಟ್ರಕ್ಷನ್ ಸೇಫ್ಟಿ ಮ್ಯಾನೇಜ್‌ಮೆಂಟ್, ಪಿಜಿ ಡಿಪ್ಲೊಮಾ ಇನ್ ಇಂಡಸ್ಟ್ರಿಯಲ್ ಆಂಡ್ ಕನ್‌ಸ್ಟ್ರಕ್ಷನ್ ಸೇಫ್ಟಿ ಮ್ಯಾನೇಜ್‌ಮೆಂಟ್, ಡಿಪ್ಲೊಮಾ/ಪಿಜಿ ಇನ್ ಸೇಫ್ಟಿ ಆಫ್ ಸರ್ವಿಸ್ ಇಂಡಸ್ಟ್ರಿ (ವಿದ್ಯಾರ್ಥಿನಿಯರಿಗಾಗಿ ಮಾತ್ರ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry