ಬಾಲಿವುಡ್‌ನಲ್ಲಿ ಅಪ್ಪಂದಿರ ದಿನದ ಸಂಭ್ರಮ!

7

ಬಾಲಿವುಡ್‌ನಲ್ಲಿ ಅಪ್ಪಂದಿರ ದಿನದ ಸಂಭ್ರಮ!

Published:
Updated:
ಬಾಲಿವುಡ್‌ನಲ್ಲಿ ಅಪ್ಪಂದಿರ ದಿನದ ಸಂಭ್ರಮ!

ಮುಂಬೈ: ಅಪ್ಪನ ದಿನದ ಸಂಭ್ರಮವನ್ನು ಬಾಲಿವುಡ್ ತಾರೆಯರು ಭಾನುವಾರ ಜೋರಾಗಿಯೇ ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಲ್ಲಿ ಬಾಲಿವುಡ್‌ನ ಖ್ಯಾತನಾಮರು ತಮ್ಮ ಅಪ್ಪನ ಜತೆಗಿರುವ ಫೋಟೊಗಳನ್ನು ಹಂಚಿಕೊಂಡು ಭಾವುಕವಾಗಿ ಒಕ್ಕಣೆಯನ್ನೂ ಬರೆದು ಸಂಭ್ರಮಪಟ್ಟಿದ್ದಾರೆ.

ಕಪ್ಪುಸುಂದರಿ ಕಾಜೋಲ್ ಮೊದಲ ಬಾರಿಗೆ ಅಪ್ಪ ಶೋಮು ಮುಖರ್ಜಿ ಅವರ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ಅಪ್ಪನ ದಿನಾಚರಣೆಯ ಶುಭಾಶಯಗಳು. ನನಗೆ ನೆನಪಿದೆ ಎಂದು ಹೃದಯದ ಚಿಹ್ನೆಯನ್ನು ಹಾಕಿದ್ದರೆ, ಬಿಪಾಶಾ ಬಸು ಅಪ್ಪನೊಂದಿಗಿರುವ ಚಿತ್ರ ಹಾಕಿ, ಥ್ಯಾಂಕ್ಯೂ ಪಪ್ಪಾ. ನಿನ್ನಿಂದಾಗಿ ನಾನು. ಐ ಲವ್‌ ಯೂ..’ ಎಂದು ಬರೆದುಕೊಂಡಿದ್ದಾರೆ.

ಜೆನಿಲಿಯಾ ಡಿಸೋಜಾ, ಪತಿ ರಿತೇಶ್ ದೇಶ್‌ಮುಖ್ ನದಿ ಮುಖವೊಡ್ಡಿ, ಇಬ್ಬರ ಮಕ್ಕಳ ಕೈಗಳನ್ನು ತಮ್ಮ ಕೈಯಲ್ಲಿ ಹಿಡಿದು ನಿಂತಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಅಪ್ಪನ ದಿನಾಚರಣೆಯ ಶುಭಾಶಯಗಳು ಬಾಬಾ. ನಾವು ಯಾವಾಗಲೂ ನಿಮ್ಮ ಕೈ ಹಿಡಿದುಕೊಳ್ಳಲು ಬಯಸುತ್ತೇವೆ. ಏಕೆಂದರೆ ನಮಗೆ ಗೊತ್ತು ಅದುವೇ ನಮ್ಮ ಸುರಕ್ಷಿತ ತಾಣ...’ ಎಂದು ಭಾವುಕವಾಗಿ ಬರೆದಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಕಾಜೋಲ್ ಅಗರ್‌ವಾಲ್, ಅಪ್ಪನ ತೆಕ್ಕೆಯಲ್ಲಿರುವ ಚಿತ್ರವನ್ನು ಹಂಚಿಕೊಂಡು, ‘ನಾನು ನಾನಾಗಿರಲು ನೀವು ಅನುವು ಮಾಡಿಕೊಟ್ಟಿರಿ. ಅದಕ್ಕಾಗಿ ಧನ್ಯವಾದಗಳು. ನೀವು ನನಗೆ ಸದಾ ಸ್ಫೂರ್ತಿ. ಎಂದಿಗೂ ಮೌಲ್ಯಗಳ ವಿಚಾರವಾಗಿ ರಾಜಿಯಾಗದಿರು ಎನ್ನುವ ಪಾಠವನ್ನು ನೀವು ಕಲಿಸಿಕೊಟ್ಟಿದ್ದೀರಿ ಅಪ್ಪ. ಧನ್ಯವಾದ. ಅಪ್ಪನ ದಿನದ ಶುಭಾಶಯಗಳು’ ಎನ್ನುವ ಅರ್ಥಪೂರ್ಣದ ಒಕ್ಕಣೆ ಹಾಕಿದ್ದಾರೆ.

ಇತ್ತೀಚೆಗಷ್ಟೇ ವಿವಾಹವಾದ ನಟಿ ಸೋನಂ ಕಪೂರ್ ಅಪ್ಪನೊಂದಿಗೆ ‘ಜಾದೂ ಕಿ ಛಪ್ಪಿ’ ಎನ್ನುವ ಹ್ಯಾಷ್‌ ಟ್ಯಾಗ್ ಹಾಕಿ. ನೀವೇ ನನಗೆ ಆದರ್ಶ. ನಿಮಗೆ ಗೊತ್ತಿಲ್ಲ ನಾನು ನಿಮ್ಮನ್ನು ಎಷ್ಟು ಪ್ರೀತಿಸುತ್ತೀನಿ ಅಂತ. ನಿಮಗಿಂತ ದೊಡ್ಡ ಉಡುಗೊರೆ ನನಗೆ ಮತ್ತೊಂದಿಲ್ಲ! ಎಂದು ಬರೆದುಕೊಂಡಿದ್ದಾರೆ.

ನಟ ವಿವೇಕ್ ಒಬೆರಾಯ್ ತಮ್ಮ ಕುಟುಂಬದ ಚಿತ್ರವನ್ನು ಹಾಕಿ, ‘ಮಗನ ಮೊದಲ ಹೀರೋ, ಮಗಳ ಮೊದಲ ಪ್ರೀತಿ!. ಎಲ್ಲ ಅಪ್ಪಂದಿರಿಗೂ ಶುಭಾಶಯಗಳು. ಅಪ್ಪ ನೀವೇ ನಮ್ಮ ಅತ್ಯುತ್ತಮ ಸ್ನೇಹಿತ’ ಎಂದು ಬರೆದಿರುವ ಸಾಲುಗಳು ಸೆಳೆಯುವಂತಿವೆ.

ಮೋಹಕ ತಾರೆ ಸನ್ನಿ ಲಿಯೊನ್ ಅವರ ಪತಿ ಡೇನಿಯಲ್  ದತ್ತುಮಗಳು ನಿಶಾ ಕೌರ್ ಜತೆಗೆ ಅರೆಬೆತ್ತಲೆಯಲ್ಲಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಅಪ್ಪಂದಿರ ದಿನಕ್ಕಾಗಿ ಅರ್ಪಣೆ! ಎಂದು ಡೇನಿಯಲ್ ಬರೆದುಕೊಂಡಿದ್ದು, ನಿಶಾಳಂಥ ಮಗಳ ಪ್ರೀತಿ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ಸನ್ನಿ...ಮಗಳೇ ನಮಗೆ ಎಲ್ಲ...’ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅಪ್ಪ ಶೋಮು ಮುಖರ್ಜಿಯೊಂದಿಗೆ ಕಾಜೋಲ್

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry