ಪರಸ್ಪರ ಶುಭಾಶಯ ವಿನಿಮಯ

7

ಪರಸ್ಪರ ಶುಭಾಶಯ ವಿನಿಮಯ

Published:
Updated:

ಹನುಮಸಾಗರ: ಒಂದು ತಿಂಗಳ ಪರ್ಯಂತ ರಂಜಾನ್ ತಿಂಗಳಿನಲ್ಲಿ ರೋಜಾ ಉಪವಾಸ ವ್ರತ ಕೈಕೊಂಡಿದ್ದ ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಸ್ಲಿಮರು ಶನಿವಾರ ಈದ್‌ ಉಲ್ ಫಿತ್ರ್‌ ಸಡಗರದಿಂದ ಆಚರಿಸಿದರು.

ಹನುಮಸಾಗರ, ಹೂಲಗೇರಾ, ಹನುಮನಾಳ, ಮಾಲಗಿತ್ತಿ, ನಿಲೋಗಲ್, ಕುಂಬಳಾವತಿ, ಚಳಗೇರಾ, ಕಲಾಲಬಂಡಿ, ಮೂಗನೂರ ಸೇರಿದಂತೆ ವಿವಿಧ ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ

ಶುಭಾಶಯ ವಿನಿಮಯ ಮಾಡಿಕೊಂಡರು.

ಹನುಮಸಾಗರದ ಬೀಳಗಿ ಅಗಸಿ ಬಾಗಿಲ ಬಳಿ ಇರುವ ಈದ್ಗಾ ಮೈದಾನದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ಮುಸ್ಲಿಮರು, ಮನ್ನೇರಾಳ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ತಂಜೀಮ್ ಇಸ್ಲಾಂ ಕಮಿಟಿಯ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry