ದುಡಿದ ಹಣದಲ್ಲಿ ದಾನ ಮಾಡಲು ಸಲಹೆ

7

ದುಡಿದ ಹಣದಲ್ಲಿ ದಾನ ಮಾಡಲು ಸಲಹೆ

Published:
Updated:

ಕನಕಗಿರಿ: ಈದ್ ಉಲ್–ಫಿತ್ರ್ (ರಂಜಾನ್) ಹಬ್ಬವನ್ನು ಮುಸ್ಲಿಮರು ಶನಿವಾರ ಸಡಗರ, ಸಂಭ್ರಮದಿಂದ ಆಚರಿಸಿದರು. ಇಲ್ಲಿನ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಜಾಮೀಯ ಮಸೀದಿ ಮೌಲಾನ್ ಮಹ್ಮದ ಸಜ್ಜಾದ ರಜಾ ನೂರಿ ಮಾತನಾಡಿ ಇಸ್ಲಾಂ ಧರ್ಮವು ವಿಶ್ವ ಪ್ರೇಮ, ಧಾರ್ಮಿಕ ಸಹಿಷ್ಟುತೆ, ಶಾಂತಿ, ಸೌರ್ಹಾದತೆ, ಸಹನಾಶೀಲತೆಯಂತ ಮೌಲ್ಯಗಳನ್ನು ಪ್ರತಿಪಾದಿಸಿದೆ ಎಂದು ತಿಳಿಸಿದರು. ಇಂಥ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಮುಸ್ಲಿಮರು ತಾವು ಬೆವರು ಸುರಿಸಿ ದುಡಿದ ಹಣದ ಒಂದು ಭಾಗದಲ್ಲಿ ದೀನ, ದುರ್ಬಲ ವರ್ಗದವರಿಗೆ ದಾನ, ಧರ್ಮ ಮಾಡಬೇಕೆಂದು ಕೋರಿದರು.

ಖಾಜಿ ಮೆಹಬೂಬಸಾಬ ಶೇಠ ಕುತುಬಿ ಪಠಣ ಮಾಡಿದರು. ಧರ್ಮಗುರುಗಳಾದ ಮೌಲಾನ್ ಅಬ್ದುಲ್ ರಹಿಮನ ಬರಕಾತಿ, ಅಬ್ದುಲ್ ಆಫೀಸ್ ಸಾಬ ಕ್ವಾಟಿ, ಅನ್ವರ ಮುಲ್ಲಾ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಬಸವರಾಜ್‌ ದಢೇಸೂಗುರು ಅವರು ಪಟ್ಟಣದ ಬಿಜೆಪಿ ಅಲ್ಪಸಂಖ್ಯಾತ ಮುಖಂಡರ ಮನೆಗೆ ತೆರಳಿ ಶುಭಾಶಯ ಕೋರಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ, ದೈಹಿಕ ಶಿಕ್ಷಣ ಶಿಕ್ಷಕ ಶಾಮೀದಸಾಬ ಲೈನದಾರ, ಮಾತನಾಡಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹುಲಗಪ್ಪ ವಾಲೇಕಾರ, ಸದಸ್ಯರಾದ ಮಹ್ಮದ ಪಾಷ ಮುಲ್ಲಾರ, ಹುಸೇನಸಾಬ ಸೂಳೇಕಲ್, ಖಾಜಸಾಬ ಗುರಿಕಾರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನೂರುಸಾಬ ಮೇಸ್ತ್ರಿ, ಈದ್ಗಾ ಮೈದಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬುಸಾಬ ಸೂಳೇಕಲ್ ಹಾಗೂ ಮುಸಲಾಪುರ, ಉಪಲಾಪುರ, ಸೋಮಸಾಗರ, ಶಿರಿವಾರ , ಬಸರಿಹಾಳ, ಸೋಮಸಾಗರ, ಬಂಕಾಪುರ, ಚಿಕ್ಕಖೇಡ, ನೀರಲೂಟಿ ಗ್ರಾಮಸ್ಥರು ಭಾಗವಹಿಸಿದ್ದರು.

ತಾಲ್ಲೂಕಿನ ವಿವಿಧೆಡೆ ಆಚರಣೆ : ಇಲ್ಲಿಗೆ ಸಮೀಪದ ವಿವಿಧ ಗ್ರಾಮಗಳಲ್ಲಿ ಈದ್ –ಉಲ್–ಫಿತ್ರ್ ಹಬ್ಬವನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಸಮೀಪದ ಹುಲಿಹೈದರ ಗ್ರಾಮದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಗುಲಾಮ ಮುಸ್ತಾಪ ಸಾಮೂಹಿಕ ಪ್ರಾರ್ಥನೆ ಮಾಡಿಸಿದರು. ಜಾಮೀಯ ಸಮಿತಿ ಅಧ್ಯಕ್ಷ ರಾಜಸಾಬ ಬಸರಿಗಿಡದ, ಉಪಾಧ್ಯಕ್ಷ ಹುಸೇನಸಾಬ ಟೇಲರ್, ಕಾರ್ಯದರ್ಶಿ ಮುರ್ತುಜಸಾಬ ಪಠಾಣ, ಶಾಮೀದಲಿ, ಮಾಜಿ ಅಧ್ಯಕ್ಷ ಜೀಲನಸಾಬ ಕಾತರಕಿ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry