ಮಲ್ಯ ವಿರುದ್ಧ ಹೊಸ ಆರೋಪಪಟ್ಟಿ ದಾಖಲಿಸಿದ ಜಾರಿ ನಿರ್ದೇಶನಾಲಯ

7

ಮಲ್ಯ ವಿರುದ್ಧ ಹೊಸ ಆರೋಪಪಟ್ಟಿ ದಾಖಲಿಸಿದ ಜಾರಿ ನಿರ್ದೇಶನಾಲಯ

Published:
Updated:
ಮಲ್ಯ ಮೇಲೆ ಹೊಸ ಆರೋಪಪಟ್ಟಿ ದಾಖಲಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ ಹಾಗೂ ಅವರ ಕಂಪನಿ ವಿರುದ್ಧ  ಜಾರಿ ನಿರ್ದೇಶನಾಲಯ ಮತ್ತೊಂದು ಹೊಸ ಆರೋಪಪಟ್ಟಿ ದಾಖಲಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಾಖಲಿಸಿದ ದೂರಿನನ್ವಯ 6,027 ಕೋಟಿ ವಂಚನೆ ಆರೋಪದ ಅಡಿಯಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಮಲ್ಯ ಅವರು ಎಸ್‌ಬಿಐ ಬ್ಯಾಂಕ್‌ನಿಂದ 2005–10ರ ಅವಧಿಯಲ್ಲಿ 6,027ಕೋಟಿ ಹಣವನ್ನು ಪಡೆದುಕೊಂಡಿದ್ದರು.

ಅಲ್ಲದೇ ಮಲ್ಯ ಅವರ 9 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಬೇಕೆಂದು ಕೇಂದ್ರ ತನಿಖಾ ದಳವು ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಕಳೆದ ವರ್ಷ 900 ಕೋಟಿ ವಂಚನೆಯಡಿ ಮೊದಲ ಆರೋಪ ಪಟ್ಟಿ ದಾಖಲಿಸಲಾಗಿತ್ತು. ಇದೀಗ ಮಲ್ಯ ಲಂಡನ್‌ನಲ್ಲಿ ನೆಲೆಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry