ಗುರುವಾರ , ಜುಲೈ 7, 2022
20 °C

ಜೊತೆಯಾಗಿ, ಹಿತವಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೊತೆಯಾಗಿ, ಹಿತವಾಗಿ

ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹವಾಗಿ ಆರು ತಿಂಗಳು ಕಳೆದಿದೆಯಷ್ಟೇ. ಆದರೆ, ಈ ಜೋಡಿ ಅಭಿಮಾನಿಗಳ ಪಾಲಿಗೆ ಇನ್ನೂ ನವಜೋಡಿಯಂತೆ ಕಂಗೊಳಿಸುತ್ತಿದೆ. ಎಲ್ಲೇ ಹೋದರೂ ಈ ಜೋಡಿ ಜತೆಯಾಗಿಯೇ ಇರುತ್ತದೆ. ಮೊನ್ನೆ ಮುಂಬೈನಲ್ಲಿ ರೆಸ್ಟೊರೆಂಟ್‌ವೊಂದಕ್ಕೆ ಈ ಜೋಡಿ ಒಂದೇ ಬಣ್ಣದ ಬಟ್ಟೆ ತೊಟ್ಟು ಭೇಟಿ ನೀಡಿತ್ತು.

ಕಪ್ಪು ಬಣ್ಣದ ಟೀಶರ್ಟ್ ಮತ್ತು ಪ್ಯಾಂಟ್‌ನಲ್ಲಿ ವಿರಾಟ್ ಮಿಂಚುತ್ತಿದ್ದರೆ, ತೋಳಿಲ್ಲದ ಕಪ್ಪು ಬಣ್ಣದ ಮೇಲುಡುಗೆ ಹಾಗೂ ದಟ್ಟನೀಲಿ ಜೀನ್ಸ್ ಪ್ಯಾಂಟಿನಲ್ಲಿ ಅನುಷ್ಕಾ ನೋಡುಗರ ಗಮನ ಸೆಳೆಯುತ್ತಿದ್ದರು. ಬಿಳಿ ಕಾರಿನಿಂದ ಇಳಿದು ಬಂದ ವಿರಾಟ್ ಅವರನ್ನು ನೋಡಿದ ಅಭಿಮಾನಿಗಳು ಮುತ್ತಿಗೆ ಹಾಕಿದರು. ವಿರಾಟ್ ಬೆನ್ನಲ್ಲೇ ಅನುಷ್ಕಾ ಕೂಡಾ ಕಾರಿನಿಂದ ಇಳಿದದ್ದನ್ನು ಕಂಡು ಅಭಿಮಾನಿಗಳ ಹರ್ಷಕ್ಕೆ ಎಣೆಯೇ ಇರಲಿಲ್ಲ.

ಮದುವೆಯಾದಗಿನಿಂದ ಹಿಡಿದು ಇತ್ತೀಚಿನವರೆಗೆ ಈ ಜೋಡಿ ಎಲ್ಲೇ ಹೋಗಲಿ ಅಭಿಮಾನಿಗಳ ದಂಡೇ ನೆರೆದಿರುತ್ತದೆ. ಅಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲ ಒಂದು ಫೋಟೊ ಇದ್ದೇ ಇರುತ್ತದೆ. ಮದುವೆಯಾಗಿ ಇಷ್ಟು ದಿನಗಳು ಉರುಳಿದರೂ ಈ ಜೋಡಿಯ ಬೇಡಿಕೆ ಇನ್ನೂ ಕಮ್ಮಿಯಾಗದಿರುವುದು ಬಾಲಿವುಡ್‌ನಲ್ಲಿ ಕೆಲವರ ಹೊಟ್ಟೆಉರಿಗೆ ಕಾರಣವಾಗಿದೆಯಂತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.