ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಜು ಅಸಿಸ್ಟಂಟ್‌ನಲ್ಲಿ ಸಿಇಟಿ ಮಾಹಿತಿ

Last Updated 17 ಜೂನ್ 2018, 14:40 IST
ಅಕ್ಷರ ಗಾತ್ರ

ಸಿಇಟಿ ಫಲಿತಾಂಶ ಬಂದಿದೆ. ನಿಮ್ಮ ಆಯ್ಕೆ ಎಂಜಿನಿಯರಿಂಗ್ ಆಗಿದ್ದಲ್ಲಿ ಮುಂದೆ ಯಾವ ಕಾಲೇಜು ಆಯ್ಕೆ ಮಾಡಬೇಕು‌ ಎಂದು ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ ಗೂಗಲ್ ಪ್ಲೇಸ್ಟೋರ್ ನಿಂದ Edu Assistant app ಅನ್ನು ಈಗಲೇ ಡೌನ್‌ಲೋಡ್‌ ಮಾಡಿಕೊಳ್ಳಿ.

ರಾಜ್ಯದಲ್ಲಿರುವ ಸುಮಾರು 200ಕ್ಕೂ ಅಧಿಕ ಎಂಜಿನಿಯರಿಂಗ್ ಕಾಲೇಜುಗಳ ಸಂಪೂರ್ಣ ಮಾಹಿತಿ ಈ appನಲ್ಲಿ ಲಭ್ಯವಿದೆ. ಪ್ರತಿ ಕಾಲೇಜಿನ ಸಿಇಟಿ ಕೋಡ್, ಲಭ್ಯವಿರುವ ಕೋರ್ಸ್‌ಗಳು, 2017 ನೇ ಸಾಲಿನ ಕಟ್-ಆಫ್ ರ‍್ಯಾಂಕ್‌ ಮಾಹಿತಿಯನ್ನು ಈ app ನಲ್ಲಿ ಸುಲಭವಾಗಿ ಸಿಗುವ ರೀತಿಯಲ್ಲಿ ತಯಾರಿಸಲಾಗಿದೆ. ನಿಮಗೆ ಬೇಕಾಗಿರುವ ಕೋರ್ಸ್ ಯಾವ ಕಾಲೇಜುಗಳಲ್ಲಿ ಲಭ್ಯವಿದೆ ಎಂದು ಕೆಲವೇ ಕ್ಷಣಗಳಲ್ಲಿ ಹುಡುಕಬಹುದು.

ಆ್ಯಪ್‌ ವೈಶಿಷ್ಟ್ಯ: ರ್‍ಯಾಂಕ್ ವಿಶ್ಲೇಷಣೆ (Rank Analysis). ಇಲ್ಲಿ ನೀವು ನಿಮ್ಮ ಸಿಇಟಿ ರ್‍ಯಾಂಕ್‌, ಮೀಸಲಾತಿ ಹಾಗೂ ಇಚ್ಛೆಯ ಕೋರ್ಸ್ ಅನ್ನು ದಾಖಲಿಸಿ
ದರೆ, ಹಳೆಯ ಕಟ್-ಆಫ್ ರ್‍ಯಾಂಕ್‌ ಆಧಾರದ ಮೇಲೆ ನಿಮಗೆ ಈ ಬಾರಿ ಯಾವ ಕಾಲೇಜಿನಲ್ಲಿ ಪ್ರವೇಶ ಸಿಗಬಹುದು ಎಂದು ಸೂಚಿಸುತ್ತದೆ. ಈ ಮೊದಲು, ಈ ಕೆಲಸ ಮುಗಿಸಲು ಹಲವು ದಿನಗಳೇ ಬೇಕಾಗುತ್ತಿತ್ತು. ಎಜು ಅಸಿಸ್ಟಂಟ್‌ ಆ್ಯಪ್‌ನಿಂದಾಗಿ ಕೆಲವೇ ಕ್ಷಣಗಳಲ್ಲಿ ಈ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು. ಈ ಆ್ಯಪ್‌ ರೂವಾರಿ ನಿಶಾಂತ್ ಶ್ರೀಧರ್ ಜೋಗಿ.

ನಿಮ್ಮ ಇಚ್ಛೆಯ ಕಾಲೇಜು ಹಾಗೂ ಕೋರ್ಸ್ ಗಳನ್ನು ನಿಮ್ಮ ಇಷ್ಟವಾದ ಕಾಲೇಜುಗಳ ಪಟ್ಟಿಗೆ ಸೇರಿಸಿ ಸುಲಭವಾಗಿ ನಿಮ್ಮ ಆಯ್ಕೆಯ ಪಟ್ಟಿಯನ್ನು ತಯಾರಿಸಿಕೊಳ್ಳಬಹುದು.

ಅಷ್ಟೇ ಅಲ್ಲದೆ ಈ ಆ್ಯಪ್‌ ನಲ್ಲಿ ಸಿಇಟಿ ದಾಖಲೆ ಪರಿಶೀಲನೆಗೆ ಸಂಬಂಧಪಟ್ಟ ಹಾಗೆ ಅಗತ್ಯವಿರುವ ದಾಖಲೆಗಳ ಪಟ್ಟಿ, ಪರಿಶೀಲನೆ ಪ್ರಕ್ರಿಯೆಯ ಹಂತಗಳು, ಪರಿಶೀಲನ ಸ್ಥಳ ಹಾಗೂ ದಿನಾಂಕಗಳ ಬಗ್ಗೆಯೂ ಮಾಹಿತಿ ಲಭ್ಯವಿದೆ.

ಒಟ್ಟಿನಲ್ಲಿ ಎಜು ಅಸಿಸ್ಟಂಟ್‌ ಆ್ಯಪ್‌ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಸೇರಲು ಇರುವ ಹಲವು ಗೊಂದಲಗಳನ್ನು ನಿವಾರಿಸುತ್ತದೆ. ಈ ಆ್ಯಪ್‌ ಬಳಕೆದಾರರಿಗೆ ಸಂಪೂರ್ಣ ಉಚಿತವಾಗಿ ಲಭ್ಯವಿದೆ.
-ನಿಶಾಂತ್‌ ಶ್ರೀಧರ್‌ ಜೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT