ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿ ಬೆಲ್ಲದ ಲಾಭವ ಬಲ್ಲಿರಾ?

Last Updated 17 ಜೂನ್ 2018, 14:42 IST
ಅಕ್ಷರ ಗಾತ್ರ

ಬೆಲ್ಲವನ್ನು ಸಕ್ಕರೆಯ ಪರ್ಯಾಯವಾಗಿ ಬಳಸುತ್ತಾರೆ. ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಪೊಟ್ಯಾಷಿಯಂಗಳು ಇರುವುದರಿಂದ ಇದರ ಸೇವನೆ ದೇಹಕ್ಕೆ ಒಳ್ಳೆಯದು. ದಿನನಿತ್ಯದ ಆಹಾರದಲ್ಲಿ ಬೆಲ್ಲ ಉಪಯೋಗಿಸಿದರೆ ಅನೇಕ ಪ್ರಯೋಜನಗಳಿವೆ.

* ಸಕ್ಕರೆ ಸೇವನೆಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಆದರೆ ಬೆಲ್ಲ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ.

* ಒಂದು ಗ್ಲಾಸ್‌ ಹಾಲಿಗೆ ಬೆಲ್ಲದ ಪುಡಿ ಹಾಕಿಕೊಂಡು ಪ್ರತಿದಿನ ಕುಡಿದರೆ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮುಖದಲ್ಲಿ ಮೊಡವೆ ಬೀಳುವುದನ್ನು ಕಡಿಮೆ ಮಾಡುತ್ತದೆ.

* ರಕ್ತವನ್ನು ಶುದ್ದೀಕರಿಸುತ್ತದೆ. ಹಾಗೇ ಕರುಳಿನ ಕೆಲಸವನ್ನು ಚುರುಕುಗೊಳಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣ ಬೆಲ್ಲ ಹೊಂದಿದೆ.

* ಮಹಿಳೆಯರು ಬೆಲ್ಲ ತಿನ್ನುತ್ತಿದ್ದರೆ ಮುಟ್ಟಿನ ಸಮಯದಲ್ಲಿ ಕಂಡುಬರುವ ಹೊಟ್ಟೆನೋವು, ಸೊಂಟನೋವು ಕಡಿಮೆಯಾಗುತ್ತದೆ. ಆ ಸಮಯದಲ್ಲಿ ಕಂಡು ಬರುವ ಮಾನಸಿಕ ತೊಂದರೆಗೂ ಕಡಿಮೆಯಾಗುತ್ತದೆ. ಬೆಲ್ಲವು ಮನಸನ್ನು ಖುಷಿಗೊಳಿಸುವ ಒಂದು ಬಗೆಯ ಹಾರ್ಮೋನು ಬಿಡುಗಡೆ ಮಾಡುತ್ತದೆ. ಇದು ಮನಸನ್ನು ಶಾಂತಗೊಳಿಸುತ್ತದೆ.

* ಒಂದು ಲೋಟ ಹಾಲಿಗೆ ಬೆಲ್ಲ ಹಾಗೂ ಶುಂಠಿಪುಡಿಯನ್ನು ಹಾಕಿ ಕುಡಿಯುತ್ತಿದ್ದರೆ ಸಂಧಿವಾತ ಕ್ರಮೇಣ ಕಡಿಮೆಯಾಗುತ್ತದೆ

* ಗರ್ಭಿಣಿಯರಿಗೆ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ. ಶಿಶುವಿನ ಬೆಳವಣಿಗೆಗೂ ಉತ್ತಮ

* ನಿತ್ಯವೂ ಬೆಲ್ಲ ಸೇರಿಸಿದ ಹಾಲನ್ನು ಬೆಳಿಗ್ಗೆ ಮತ್ತು ರಾತ್ರಿ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುತ್ತದೆ

* ಸುಸ್ತಾದಾಗ ಬೆಲ್ಲ ಹಾಗೂ ನೀರು ಕುಡಿಯಬೇಕು. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ, ನೆಗಡಿ, ಶೀತ, ಕೆಮ್ಮಿನಂತಹ ಪದೇಪದೇ ಕಾಡುವುದಿಲ್ಲ

* ಊಟದ ನಂತರ ಚಿಕ್ಕ ಬೆಲ್ಲತುಂಡು ತಿಂದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. →→v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT