ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವದಂತಿಗಳಿಗೆ ತೆರೆ ಎಳೆದ ಇಲಿಯಾನಾ...

Last Updated 17 ಜೂನ್ 2018, 14:43 IST
ಅಕ್ಷರ ಗಾತ್ರ

‘ನಾನು ಬಸುರಿ ಅಲ್ಲ’ ಅಂತ ಕೊನೆಗೂ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಸ್ ಸ್ಪಷ್ಟನೆ ಕೊಟ್ಟಿದ್ದಾರೆ. ‘ನನಗೂ ಮದುವೆಯಾಗಿ, ಬಸುರಿಯಾಗಬೇಕು ಅಂತ ಆಸೆ ಇದೆ. ಒಂದು ವೇಳೆ ಹಾಗೇನಾದರೂ ಆದರೆ ನಾನು ತುಂಬಾ ಖುಷಿ ಪಡ್ತೀನಿ. ಆಗ ನಾನೇ ನಿಮಗೆಲ್ಲಾ ಹೇಳ್ತೀನಿ’ ಅಂತ ತುಸು ಖಡಕ್ ಆಗಿಯೇ ಇಲಿಯಾನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

18ನೇ ವರ್ಷದಲ್ಲೇ ಮಾಡೆಲಿಂಗ್ ಮತ್ತು ಸಿನಿಜಗತ್ತಿಗೆ ಪದಾರ್ಪಣೆ ಮಾಡಿದ ಇಲಿಯಾನಾ, ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ತಮ್ಮ ಮೈಕಟ್ಟಿನ ಕಾರಣಕ್ಕಾಗಿ ಮಾನಸಿಕ ವೇದನೆ ಅನುಭವಿಸಿ ಖಿನ್ನತೆಗೆ ಜಾರಿದ್ದರು. ‘ಬಾಡಿ ಡಿಸ್ಮಾರ್ಫಿಕ್‌ ಡಿಸಾರ್ಡರ್‌’ (ಬಿಡಿಡಿ) ಎಂಬ ಮಾನಸಿಕ ಸಮಸ್ಯೆಯಿಂದ ಬಳಲಿದ್ದ ಅವರು ಅದರಿಂದ ಹೊರಬಂದು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದರು.

ನಂತರದ ದಿನಗಳಲ್ಲಿ ಟೀಕೆ–ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದ ಇಲಿಯಾನಾ  ಕೆಲ ತಿಂಗಳುಗಳ ಹಿಂದೆಯಷ್ಟೇ ತಮ್ಮಿಷ್ಟದ ಗೆಳೆಯ ಫೋಟೊಗ್ರಾಫರ್ ಆ್ಯಂಡ್ರೂ ನೀಬೋನ್ ಜತೆಗೆ ಚುಂಬಿಸುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದರು.

ಈ ಚಿತ್ರದ ಜತೆಗೆ  ‘ಹಬ್ಬಿ’ ಎನ್ನುವ ಪದವನ್ನು ಹ್ಯಾಷ್‌ಟ್ಯಾಗ್ ಮಾದರಿಯಲ್ಲಿ ವಿಶೇಷವಾಗಿ ಇಲಿಯಾನಾ ಬರೆದಿದ್ದರು. ಅದನ್ನು ನೋಡಿದ ಇಲಿಯಾನಾ ಅಭಿಮಾನಿಗಳು ಇಲಿಯಾನಾ ಸದ್ದಿಲ್ಲದೇ ಮದುವೆಯಾಗಿಬಿಟ್ಟಿದ್ದಾರೆ ಎಂದು ಗುಲ್ಲೆಬ್ಬಿಸಿದ್ದರು.

ಆಗ ಗೆಳೆಯ ಆ್ಯಂಡ್ರೂವಿನ ಮೈಬಣ್ಣದ ಕುರಿತ ನೆಟ್ಟಿಗರ ಟ್ರೋಲ್‌ಗಳಿಗೆ ಖಾರವಾಗಿಯೇ ಮಾತನಾಡಿದ್ದ ಇಲಿಯಾನಾ, ಈಗ ತಮ್ಮ ವಿರುದ್ಧ ಸುಖಾಸುಮ್ಮನೆ ಸುಳ್ಳು ಸುದ್ದಿಹಬ್ಬಿಸುತ್ತಿರುವ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

‘ನಾನು ಮದುವೆ ಆಗುತ್ತೀನೋ ಬಿಡ್ತೀನೋ ಅದು ನನ್ನ ವೈಯಕ್ತಿಕ ವಿಷಯ. ಹೀಗೆಲ್ಲಾ ಗಾಳಿ ಸುದ್ದಿ ಹಬ್ಬಿಸಿದರೆ ನಿಮಗೆಲ್ಲಾ ಏನು ಸಿಗುತ್ತೆ? ನಾನು ಸಾರ್ವಜನಿಕ ವ್ಯಕ್ತಿ ಇರಬಹುದು. ಆದರೆ, ನಾನು ಸಾರ್ವಜನಿಕ ಆಸ್ತಿ ಅಲ್ಲ. ಎಂದೂ ಇಲಿಯಾನಾ ಕಿಡಿಕಾರಿದ್ದಾರೆ.

ನನ್ನ ಕೈಯಲ್ಲಿ ಅವಕಾಶಗಳು ಇರಲಿ ಬಿಡಲಿ, ಎಂದಿಗೂ ನನ್ನ ಮೊದಲ ಆದ್ಯತೆ ಕುಟುಂಬವೇ ಆಗಿರುತ್ತದೆ. ನಂತರದ ಆದ್ಯತೆ ವೃತ್ತಿ ಜೀವನದ್ದು ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿರುವ ಈ ಸುಂದರಿ ಇತ್ತೀಚೆಗಷ್ಟೇ ಅಜಯ್ ದೇವಗನ್ ಜತೆ ‘ರೇಡ್’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT