ಪೆಲಿಕಾನ್‌ ಬೇಟೆ: ಚಿತ್ರ ವೈರಲ್‌

7

ಪೆಲಿಕಾನ್‌ ಬೇಟೆ: ಚಿತ್ರ ವೈರಲ್‌

Published:
Updated:
ಪೆಲಿಕಾನ್‌ ಬೇಟೆ: ಚಿತ್ರ ವೈರಲ್‌

ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಭಾನುವಾರ ಪೆಲಿಕಾನ್‌ಗೆ ಕಲ್ಲಿನಿಂದ ಹೊಡೆದು ಕೊಂದಿದ್ದಾನೆ. ಪಕ್ಷಿಯ ಮೃತದೇಹವನ್ನು ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕಿರುಗಾವಲು ಗ್ರಾಮದ ಕುಮಾರ್‌ ಪಕ್ಷಿಯನ್ನು ಕೊಂದ ಆರೋಪಿ. ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವೈರಲ್‌ ಆಗುತ್ತಿದ್ದಂತೆ ಅರಣ್ಯಾಧಿಕಾರಿಗಳು ಕುಮಾರ್‌ನನ್ನು ಬಂಧಿಸಿದ್ದಾರೆ.

‘ಸಾಯುತ್ತಿದ್ದ ಪಕ್ಷಿಯನ್ನು ಎತ್ತಿಕೊಂಡು ಹೋಗುತ್ತಿದ್ದೆ, ಹೊಡೆದು ಸಾಯಿಸಿಲ್ಲ ಎಂದು ಆರೋಪಿ ತಿಳಿಸಿದ್ದಾನೆ. ಸೋಮವಾರ ಪಕ್ಷಿಯ ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ಕಾರಣ ತಿಳಿಯಲಾಗುವುದು’ ಎಂದು ಆರ್‌ಎಫ್‌ಒ ರಮೇಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry