7

ಭಾರತೀಯ ವಿದ್ಯಾರ್ಥಿ ಹತ್ಯೆ: ಆರೋಪ ಸಾಬೀತು

Published:
Updated:
ಭಾರತೀಯ ವಿದ್ಯಾರ್ಥಿ ಹತ್ಯೆ: ಆರೋಪ ಸಾಬೀತು

ವಾಷಿಂಗ್ಟನ್‌: ಭಾರತೀಯ ವಿದ್ಯಾರ್ಥಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ನಂತರ ವಿಚಾರಣೆ ಪೂರ್ಣಗೊಂಡಿದ್ದು, 23 ವರ್ಷದ ವ್ಯಕ್ತಿಯೊಬ್ಬ ಅಪರಾಧಿ ಎಂದು ಸಾಬೀತಾಗಿದೆ.

ದಕ್ಷಿಣ ಇಲಿನಾಯ್ಸ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿ ಪ್ರವೀಣ್‌ ವರ್ಗೀಸ್ 2014ರಲ್ಲಿ ಸಾವಿಗೀಡಾಗಿದ್ದ. ಕಾರ್ಬನ್‌ಡೇಲ್‌ ಪೊಲೀಸರು ಇದೊಂದು ಭೀಕರ ಅಪಘಾತ ಎಂದು ಪ್ರತಿಪಾದಿಸಿದ್ದರು. ಆದರೆ, ಪ್ರವೀಣ್‌ ಕುಟುಂಬಸ್ಥರು ಪ್ರಕರಣದ ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದಲ್ಲದೆ, ಸ್ವತಂತ್ರ ಶವಪರೀಕ್ಷೆ ನಡೆಸುವಂತೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಸಂಬಂಧ, 12 ಸದಸ್ಯರನ್ನೊಳಗೊಂಡ ತೀರ್ಪುಗಾರರ ತಂಡ ರಚಿಸಲಾಗಿತ್ತು. ಈ ತಂಡವು, ಗೇಗ್‌ ಬೆಥೂನ್‌ನನ್ನು ಅಪರಾಧಿ ಎಂದು ಘೋಷಿಸಿದೆ. ಇವನು ಪ್ರವೀಣ್‌ನನ್ನು ಹೊಡೆದು ಸಾಯಿಸಿದ್ದಾನೆ ಎಂದು ತಂಡ ಹೇಳಿದೆ. ಆದರೆ, ಶಿಕ್ಷೆಯ ಪ್ರಮಾಣವನ್ನು ಇನ್ನೂ ಘೋಷಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry