ಆಯ್ಕೆ ಯಾವಾಗ?

7

ಆಯ್ಕೆ ಯಾವಾಗ?

Published:
Updated:

ಪಿಯು ಉಪನ್ಯಾಸಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿ ನಾಲ್ಕು ವರ್ಷಗಳು ಕಳೆದಿವೆ. ಒಂದಲ್ಲಾ ಒಂದು ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬರಲಾಗುತ್ತಿದೆ.

ಉಪನ್ಯಾಸಕರಾಗಬೇಕೆಂಬ ಹಂಬಲದಿಂದ ಸಾವಿರಾರು ನಿರುದ್ಯೋಗಿಗಳು ಸಿಇಟಿ ಬರೆಯಲು ಸಿದ್ಧರಾಗುತ್ತಿದ್ದು, ಸರ್ಕಾರದ ವಿಳಂಬ ನೀತಿಯಿಂದಾಗಿ ನಿರಾಶರಾಗಿದ್ದಾರೆ. ಆಯ್ಕೆ ಪ್ರಕ್ರಿಯೆ ವಿಳಂಬಕ್ಕೆ ಕಾರಣ ನೀಡದಿರುವ ಇಲಾಖೆಯ ನಡೆ ಖಂಡನಾರ್ಹ.

ಸರ್ಕಾರಿ ಕಾಲೇಜುಗಳ ಮೆಟ್ಟಿಲು ಹತ್ತುವವರಲ್ಲಿ ಗ್ರಾಮೀಣ ಭಾಗದ, ಆರ್ಥಿಕವಾಗಿ ದುರ್ಬಲರಾದ ಮಕ್ಕಳೇ ಹೆಚ್ಚಾಗಿರುತ್ತಾರೆ. ಇಂಥ ಕಡೆಗಳಲ್ಲಿ ಉಪನ್ಯಾಸಕರೇ ಇಲ್ಲ ಎಂದರೆ ಆ ಮಕ್ಕಳ ಸ್ಥಿತಿ ಏನಾಗಬೇಕು? ಈ ಕುರಿತು ಸರ್ಕಾರ ಚಿಂತನೆ ನಡೆಸಬೇಕು. ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಬೇಗ ಚಾಲನೆ ನೀಡಬೇಕು.

-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry