ಅಸ್ಸಾಂನಲ್ಲಿ ಪ್ರವಾಹ: ಐವರ ಸಾವು

7

ಅಸ್ಸಾಂನಲ್ಲಿ ಪ್ರವಾಹ: ಐವರ ಸಾವು

Published:
Updated:
ಅಸ್ಸಾಂನಲ್ಲಿ ಪ್ರವಾಹ: ಐವರ ಸಾವು

ಗುವಾಹಟಿ: ಅಸ್ಸಾಂನಲ್ಲಿ ಉಂಟಾದ ಪ್ರವಾಹದಿಂದ ಐವರು ಸಾವಿಗೀಡಾಗಿದ್ದು, ಸುಮಾರು 4.5 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ಕರಿಮಗಂಜ್‌ ಜಿಲ್ಲೆಯಲ್ಲಿ ಭೀಕರ ಪರಿಸ್ಥಿತಿ ತಲೆದೋರಿದ್ದು, 2.15 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ.

673 ಗ್ರಾಮಗಳು ಜಲಾವೃತಗೊಂಡಿದ್ದು, 1,512 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಹಲವೆಡೆ ರಸ್ತೆ, ಸೇತುವೆಗಳು ಹಾನಿಗೊಂಡಿವೆ. ಕಳೆದ 24 ಗಂಟೆಯಲ್ಲಿ ಸುಮಾರು 6‌,150 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

481 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, 1.73ಲಕ್ಷ ಮಂದಿ ಆಶ್ರಯ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂಗಾರು ಚುರುಕು

ನವದೆಹಲಿ ವರದಿ:
ನೈರುತ್ಯ ಮುಂಗಾರು ಐದಾರು ದಿನಗಳಲ್ಲಿ ಮತ್ತೆ ಕ್ರಿಯಾಶೀಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇದೇ 26ರಿಂದ ಉತ್ತಮ ಮಳೆಯಾಗಲಿದೆ. ಒಡಿಶಾ ಮತ್ತು ಇತರ ಪೂರ್ವ ಭಾಗದ ರಾಜ್ಯಗಳಲ್ಲಿ 23ರಿಂದ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರಾ ತಿಳಿಸಿದ್ದಾರೆ.

ಸೋಮವಾರ ಕರಾವಳಿ ಕರ್ನಾಟಕ, ಗೋವಾ ಮತ್ತು ಕೊಂಕಣ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry