ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌ ಮೋದಿ ವಿರುದ್ಧ ಹೊಸ ಎಫ್‌ಐಆರ್‌ ಸಾಧ್ಯತೆ

ಭಾರತದ ಹಲವು ಪಾಸ್‌ಪೋರ್ಟ್ ಬಳಸಿದ ಆರೋಪ
Last Updated 17 ಜೂನ್ 2018, 17:45 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅರ್ಧ ಡಜನ್‌ಗಿಂತಲೂ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ಹೊಂದಿದ ಆರೋಪಕ್ಕಾಗಿ ವಜ್ರದ ವ್ಯಾಪಾರಿ ನೀರವ್‌ ಮೋದಿ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಲು ಗಂಭೀರ ಚಿಂತನೆ ನಡೆಸಲಾಗಿದೆ.

ನೀರವ್‌ ಮೋದಿ ಸದ್ಯ ಬೆಲ್ಜಿಯಂನಲ್ಲೇ ಇರಬಹುದು ಎನ್ನುವುದನ್ನು ಭಾರತದ ಬೇಹುಗಾರಿಕೆ ಸಂಸ್ಥೆಗಳು ಪತ್ತೆ ಮಾಡಿವೆ.

ಕೇಂದ್ರ ಸರ್ಕಾರ ರದ್ದುಪಡಿಸಿದ್ದ ಎರಡು ಪಾಸ್‌ಪೋರ್ಟ್‌ಗಳನ್ನು ಸಹ ನೀರವ್‌ ಬಳಸಿಕೊಂಡು ಪ್ರವಾಸ ಕೈಗೊಂಡಿದ್ದಾರೆ. ನೀರವ್‌ ಹೊಂದಿದ್ದ ಆರು ಪಾಸ್‌ಪೋರ್ಟ್‌ಗಳಲ್ಲಿ ಎರಡನ್ನು ಕೆಲವು ಕಾಲ ಉಪಯೋಗಿಸಿದ್ದಾರೆ. ಉಳಿದ ನಾಲ್ಕು ಪಾಸ್‌ಪೋರ್ಟ್‌ಗಳು ಬಳಕೆಯಾಗಿಲ್ಲ.

ಎರಡು ಪಾಸ್‌ಪೋರ್ಟ್‌ಗಳ ಪೈಕಿ ಒಂದರಲ್ಲಿ ನೀರವ್‌ ಸಂಪೂರ್ಣ ಹೆಸರು ಇದೆ. ಇನ್ನೊಂದರಲ್ಲಿ ಮೊದಲ ಹೆಸರು ಮಾತ್ರ ಇದೆ. ಇದರ ಜತೆ ಬ್ರಿಟನ್‌ನ40 ತಿಂಗಳ ಅವಧಿಯ ವೀಸಾ ನೀಡಲಾಗಿದೆ. ಹೀಗಾಗಿ, ಇದನ್ನು ಬಳಸಿಕೊಂಡು ವಿವಿಧ ದೇಶಗಳಿಗೆ ನೀರವ್ ಪ್ರವಾಸ ಕೈಗೊಂಡಿದ್ದಾರೆ ಎನ್ನುವುದನ್ನು ಪತ್ತೆ ಮಾಡಲಾಗಿದೆ.

ನೀರವ್‌ ಅವರ ಎರಡು ಪಾಸ್‌ಪೋರ್ಟ್‌ಗಳನ್ನು ರದ್ದುಪಡಿಸಿರುವ ವಿಷಯವನ್ನು ವಿದೇಶಾಂಗ ಸಚಿವಾಲಯ ಇಂಟರ್‌ಪೋಲ್‌ಗೆ ಮಾಹಿತಿ ನೀಡಿತ್ತು. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ಕಾನೂನು ವ್ಯವಸ್ಥೆ ಇಲ್ಲದ ಕಾರಣ ಈ ದಾಖಲೆಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದಾಗಿ, ನೀರವ್‌ ವಿಮಾನ ನಿಲ್ದಾಣ ಮತ್ತು ಹಡಗಿನ ಮೂಲಕ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.‘ರದ್ದುಪ

ಡಿಸಿರುವ ಪಾಸ್‌ಪೋರ್ಟ್‌ ಬಳಸುವುದು ಮತ್ತು ಒಂದಕ್ಕಿಂತ ಹೆಚ್ಚು ಪಾಸ್‌ಪೋರ್ಟ್‌ ಹೊಂದುವುದು  ಅಪರಾಧ. ಹೀಗಾಗಿ, ಹೊಸದಾಗಿ ಎಫ್‌ಐಆರ್‌  ದಾಖಲಿಸಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತರ ದೇಶಗಳು ನೀಡಿರುವ ಪಾಸ್‌ಪೋರ್ಟ್‌ ಅನ್ನು ನೀರವ್‌ ಬಳಸುತ್ತಿದ್ದಾರೆಯೇ ಎನ್ನುವ ಬಗ್ಗೆಯೂ ತನಿಖೆ ಕೈಗೊಳ್ಳಲಾಗುತ್ತಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನೀರವ್‌ ವಿರುದ್ಧ ಬಂಧನದ ವಾರಂಟ್‌ ಹೊರಡಿಸುವಂತೆ ಇಂಟರ್‌ಪೋಲ್‌ಗೆ ಇತ್ತೀಚೆಗೆ ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT