ಮಹಿಳೆಯರ ಡಬಲ್ಸ್ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ರಿತುಪರ್ಣ ಪಾಂಡ ಮತ್ತು ಅರಾತ ಸಾರಾ ಸುನಿಲ್ 21–10, 21–12ರಲ್ಲಿ ಸಿಮ್ರನ್ ಸಿಂಘಿ ಮತ್ತು ರಿತಿಕಾ ಠಾಕರ್ ಅವರನ್ನು ಸೋಲಿಸಿದರು. ಮಿಶ್ರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಧ್ರುವ ಕಪಿಲಾ ಮತ್ತು ಮೇಘನಾ ಜಕ್ಕಂಪುಡಿ 19–21, 21–12, 21–9ರಲ್ಲಿ ಅರಾತ ಸಾರಾ ಸುನಿಲ್ ಮತ್ತು ಅರುಣ್ ಜಾರ್ಜ್ ಅವರನ್ನು ಮಣಿಸಿದರು.