ಟೆನಿಸ್‌: ಫೆಡರರ್‌ಗೆ ಪ್ರಶಸ್ತಿ

7

ಟೆನಿಸ್‌: ಫೆಡರರ್‌ಗೆ ಪ್ರಶಸ್ತಿ

Published:
Updated:
ಟೆನಿಸ್‌: ಫೆಡರರ್‌ಗೆ ಪ್ರಶಸ್ತಿ

ಸ್ಟಟ್‌ಗರ್ಟ್‌, ಜರ್ಮನಿ: ಅಮೋಘ ಆಟ ಆಡಿದ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಸ್ಟಟ್‌ಗರ್ಟ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಫೆಡರರ್ 6–4, 7–6ರ ನೇರ ಸೆಟ್‌ಗಳಿಂದ ಕೆನಡಾದ ಮಿಲೊಸ್‌ ರಾವನಿಕ್‌ ಅವರನ್ನು ಸೋಲಿಸಿದರು. ಈ ಮೂಲಕ ವೃತ್ತಿಬದುಕಿನಲ್ಲಿ 98 ಎಟಿಪಿ ಪ್ರಶಸ್ತಿಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರರಾದರು.

ರಾವನಿಕ್‌ ವಿರುದ್ಧ 10–3ರ ಗೆಲು ವಿನ ದಾಖಲೆ ಹೊಂದಿದ್ದ ರೋಜರ್‌, ಮೊದಲ ಸೆಟ್‌ನ ಆರಂಭದಿಂದಲೇ ಮಿಂಚಿದರು. ಶರವೇಗದ ಸರ್ವ್‌ಗಳನ್ನು ಸಿಡಿಸಿದ ಅವರು ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಫೆಡರರ್‌, ಎರಡನೇ ಸೆಟ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ‘ಟೈ ಬ್ರೇಕರ್‌’ನಲ್ಲಿ ಮೋಡಿ ಮಾಡಿದ ಅವರು ಖುಷಿಯ ಕಡಲಲ್ಲಿ ತೇಲಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry