ಮರುನಾಮಕರಣ ಒಪ್ಪಂದಕ್ಕೆ ಗ್ರೀಸ್‌–ಮೆಸಿಡೊನಿಯಾ ಸಹಿ

7

ಮರುನಾಮಕರಣ ಒಪ್ಪಂದಕ್ಕೆ ಗ್ರೀಸ್‌–ಮೆಸಿಡೊನಿಯಾ ಸಹಿ

Published:
Updated:
ಮರುನಾಮಕರಣ ಒಪ್ಪಂದಕ್ಕೆ ಗ್ರೀಸ್‌–ಮೆಸಿಡೊನಿಯಾ ಸಹಿ

ಪ್ಸರದೇಸ್‌ : ಮೆಸಿಡೊನಿಯಾ ರಾಷ್ಟ್ರಕ್ಕೆ ’ರಿಪಬ್ಲಿಕ್‌ ಆಫ್‌ ನಾರ್ಥ್‌ ಮೆಸಿಡೊನಿಯಾ’ ಎಂದು ಮರುನಾಮಕರಣ ಮಾಡುವ ವಿವಾದವನ್ನು ಗ್ರೀಸ್‌ ಮತ್ತು ಮೆಸಿಡೊನಿಯಾ ಇತ್ಯರ್ಥಪಡಿಸಿಕೊಂಡಿವೆ.

ಉಭಯ ದೇಶಗಳು ಈ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಿವೆ. 1991ರಿಂದ ಮರುನಾಮಕರಣ ವಿಷಯ ವಿವಾದಕ್ಕೀಡಾಗಿತ್ತು.

‘ರಿಪಬ್ಲಿಕ್‌ ಆಫ್‌ ನಾರ್ಥ್‌ ಮೆಸಿಡೊನಿಯಾ’ ಎಂದು ಕರೆಯಲೂ ಗ್ರೀಸ್‌ ಆಕ್ಷೇಪ ವ್ಯಕ್ತಪಡಿಸಿತ್ತು. ತನ್ನ ಉತ್ತರ ಪ್ರಾಂತ್ಯವನ್ನು ಇದೇ ಹೆಸರಿನಿಂದ ಕರೆಯಲಾಗುತ್ತದೆ. ಹೀಗಾಗಿ, ಈ ಹೆಸರು ಬೇಡ ಎಂದು ಗ್ರೀಸ್‌ ಪ್ರತಿಪಾದಿಸಿತ್ತು. ಮಾತುಕತೆ ಮೂಲಕ 27 ವರ್ಷಗಳ ಈ ವಿವಾದವನ್ನು ಉಭಯ ದೇಶಗಳು ಬಗೆಹರಿಸಿಕೊಂಡಿವೆ.

‘ಇದೊಂದು ಐತಿಹಾಸಿಕವಾದ ದೃಢ ನಿರ್ಧಾರ. ಶಾಂತಿ ಮಾರ್ಗದಲ್ಲಿ ಸಾಗಲು ಈ ನಿರ್ಧಾರ ಮುಕ್ತ ಮಾರ್ಗವನ್ನು ತೋರಿಸುತ್ತದೆ’ ಎಂದು ಗ್ರೀಸ್‌ ಪ್ರಧಾನಿ ಅಲೆಕ್ಸಿಸ್‌ ಟ್ಸಿಪ್ರಾಸ್‌ ಪ್ರತಿಕ್ರಿಯಿಸಿದ್ದಾರೆ.

‘ಹಿಂದಿನ ಕಹಿ ಘಟನೆಗಳನ್ನು ಮರೆತು ಭವಿಷ್ಯದ ಬಗ್ಗೆ ಉಭಯ ದೇಶಗಳು ದೃಷ್ಟಿ ಹರಿಸಬೇಕಾಗಿದೆ. ನಮ್ಮ ಜನತೆಗೂ ಶಾಂತಿ ಬೇಕಾಗಿದೆ. ನಾವು ಸದಾ ಸ್ನೇಹಿತರಾಗಿರುತ್ತೇವೆ’ ಎಂದು ಮೆಸಿಡೊನಿಯಾ ಪ್ರಧಾನಿ ಝೋರಾನ್‌ ಝೇವ್‌ ತಿಳಿಸಿದ್ದಾರೆ.

ಉಭಯ ದೇಶಗಳ ಗಡಿ ಪ್ರದೇಶವಾದ ಗ್ರೀಸ್‌ನ ಪ್ಸರದೇಸ್‌ದಲ್ಲಿ ಮೆಸಿಡೊನಿಯಾದ ಪ್ರಧಾನಿ ಝೇವ್‌ ಮತ್ತು ಟ್ಸಿಪ್ರಾಸ್‌ ಸಹಿ ಹಾಕಿದರು. ವಿಶ್ವಸಂಸ್ಥೆಯ ಸಂಧಾನಕಾರ ಮ್ಯಾಥ್ಯೂ ನಿಮೆಟ್ಝ್‌ ಅವರು ಸಹ ಒಪ್ಪಂದಕ್ಕೆ ಸಹಿ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry