ವೆಸ್ಟ್‌ ಇಂಡೀಸ್‌ ತಂಡಕ್ಕೆ ಮುನ್ನಡೆ

7

ವೆಸ್ಟ್‌ ಇಂಡೀಸ್‌ ತಂಡಕ್ಕೆ ಮುನ್ನಡೆ

Published:
Updated:
ವೆಸ್ಟ್‌ ಇಂಡೀಸ್‌ ತಂಡಕ್ಕೆ ಮುನ್ನಡೆ

ಸೇಂಟ್‌ ಲೂಸಿಯಾ, ವೆಸ್ಟ್‌ ಇಂಡೀಸ್: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಶೇನ್‌ ಡೌರಿಚ್‌ (55; 98ಎ, 5ಬೌಂ, 1ಸಿ) ಅವರ ಅರ್ಧಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮುನ್ನಡೆ ಗಳಿಸಿದೆ.

ಗ್ರಾಸ್‌ ಐಲೆಟ್‌ನಲ್ಲಿರುವ ಡರೆನ್‌ ಸಾಮಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‍ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ವಿಂಡೀಸ್‌ 100.3 ಓವರ್‌ಗಳಲ್ಲಿ 300 ರನ್‌ಗಳಿಗೆ ಆಲೌಟ್‌ ಆಯಿತು. ಎರಡನೇ ಇನಿಂಗ್ಸ್‌ ಆರಂಭಿಸಿರುವ ಲಂಕಾ ತಂಡ ಶನಿವಾರದ ಆಟದ ಅಂತ್ಯಕ್ಕೆ 9 ಓವರ್‌ಗಳಲ್ಲಿ 1 ವಿಕೆಟ್‌ಗೆ 34ರನ್‌ ದಾಖಲಿಸಿದೆ. ಈ ತಂಡ ಮೊದಲ ಇನಿಂಗ್ಸ್‌ನಲ್ಲಿ 253ರನ್‌ ಗಳಿಸಿತ್ತು.‌

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ, ಮೊದಲ ಇನಿಂಗ್ಸ್‌, 79 ಓವರ್‌ಗಳಲ್ಲಿ 253 ಮತ್ತು 9 ಓವರ್‌ಗಳಲ್ಲಿ 1 ವಿಕೆಟ್‌ಗೆ 34 (ಕುಶಾಲ್‌ ಪೆರೇರಾ 20, ಮಾಹೇಲ ಉಡವಟ್ಟೆ ಬ್ಯಾಟಿಂಗ್ 11; ಶಾನನ್‌ ಗೇಬ್ರಿಯಲ್‌ 14ಕ್ಕೆ1).

ವೆಸ್ಟ್‌ ಇಂಡೀಸ್‌: ಪ್ರಥಮ ಇನಿಂಗ್ಸ್‌, 100.3 ಓವರ್‌ಗಳಲ್ಲಿ 300 (ಡೆವೊನ್‌ ಸ್ಮಿತ್‌ 61, ಕೀರನ್‌ ಪೊವೆಲ್‌ 27, ರಾಸ್ಟನ್‌ ಚೇಸ್‌ 41, ಶೇನ್‌ ಡೌರಿಚ್‌ 55; ಲಾಹಿರು ಕುಮಾರ 86ಕ್ಕೆ4, ಕಸುನ್‌ ರಜಿತಾ 49ಕ್ಕೆ3, ಸುರಂಗ ಲಕ್ಮಲ್‌ 50ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry