7

₹ 5,514 ಕೋಟಿ ಬಂಡವಾಳ ಹೊರಹರಿವು

Published:
Updated:

ನವದೆಹಲಿ : ವಿದೇಶಿ ಹೂಡಿಕೆದಾರರು ಜೂನ್‌ ತಿಂಗಳಿನಲ್ಲಿ ಇದುವರೆಗೆ ಬಂಡವಾಳ ಮಾರುಕಟ್ಟೆಯಿಂದ₹ 5,514 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಜಾಗತಿಕ ವಾಣಿಜ್ಯ ಸಮರ ಆರಂಭವಾಗುವ ಆತಂಕ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ನಿರ್ಧಾರಗಳಿಂದಾಗಿ ಷೇರುಗಳ ಮಾರಾಟಕ್ಕೆ ಹೆಚ್ಚು ಗಮನ ನೀಡಿದ್ದಾರೆ.

ಹಿಂದಿನ 2 ತಿಂಗಳಿನಲ್ಲಿ ಬಂಡವಾಳ ಮಾರುಕಟ್ಟೆಯಿಂದ ₹45 ಸಾವಿರ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು. ‘ಜಾಗತಿಕ ವಿದ್ಯಮಾನಗಳು, ರೂಪಾಯಿ ಮೌಲ್ಯ ವ್ಯತ್ಯಯ ಮತ್ತು ಕಚ್ಚಾ ತೈಲ ದರದ ಏರಿಳಿತ ಗಮನಿಸಿ ವಹಿವಾಟು ನಡೆಸಬೇಕು’ ಎಂದು ರೆಲಿಗೇರ್ ಬ್ರೋಕಿಂಗ್‌ ಕಂಪನಿಯ ಅಧ್ಯಕ್ಷ ಜಯಂತ್‌ ಮಾಂಗ್ಲಿಕ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry