‘ಕೋಮುವಾದ ಇಂದಿಗೂ ಬೇರೂರಿದೆ’

7

‘ಕೋಮುವಾದ ಇಂದಿಗೂ ಬೇರೂರಿದೆ’

Published:
Updated:
‘ಕೋಮುವಾದ ಇಂದಿಗೂ ಬೇರೂರಿದೆ’

ಬೆಂಗಳೂರು: ‘ಸ್ವಾತಂತ್ರ್ಯ ಬಂದು ಏಳು ದಶಕ ಕಳೆದಿದ್ದರೂ ಕೋಮುವಾದ ಹಾಗೂ ಜಾತಿವಾದದ ಬೇರುಗಳು ಇಂದಿಗೂ ವ್ಯಾಪಕವಾಗಿವೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ವಿಚಾರವಾದಿ ಜಿ.ಕೆ.ಗೋವಿಂದರಾವ್‌ ಕಳವಳ ವ್ಯಕ್ತಪಡಿಸಿದರು.

ರಾಜ್ಯ ದಲಿತ ಸಂಘರ್ಷ ಸಮಿತಿಯು ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಜಾತಿವಾದಿ, ಕೋಮುವಾದಿ ಶಕ್ತಿ ವಿರೋಧಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಜಾತಿವಾದ ಹಾಗೂ ಕೋಮುವಾದದ ವಿರುದ್ಧ ಮೈತ್ರಿ ಸರ್ಕಾರ ರಚನೆಯಾಗಿದೆ. ಆದರೆ ಅವರು ಸ್ವಾರ್ಥಕ್ಕಾಗಿ ಹೊಡೆದಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಸಚಿವ ಸ್ಥಾನ ಕೊಡಲು ಸಾಧ್ಯವೇ. ರಾಜಕೀಯ ಸ್ಥಾನಮಾನದ ಕುರಿತು ಇರುವ ದುರಾಸೆ ಕೂಡ ಜಾತಿವಾದವೇ ಆಗಿರುತ್ತದೆ. ಕೋಮುವಾದದ ವಿರುದ್ಧ ನಿಲುವು ಹೊಂದಿರುವ ಸರ್ಕಾರವನ್ನು ಉಳಿಸಿಕೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ಸಮಾಜದಲ್ಲಿ ಸುಧಾರಣೆಯಾಗಬೇಕಾದರೆ ಮೇಲ್ವರ್ಗದವರು ಮೊದಲು ಜಾತಿಯನ್ನು ಬಿಡಬೇಕು. ಆರ್‌ಎಸ್‌ಎಸ್‌ನವರು ಮಹಿಳೆಯರನ್ನು ಎರಡನೇ ದರ್ಜೆಯ ನಾಗರೀಕರನ್ನಾಗಿ ನೋಡುತ್ತಾರೆ. ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವುದು ಅವರ ಚಿಂತನೆಯಲ್ಲಿ ಬೇರೂರಿದೆ’ ಎಂದೂ ಅವರು ಪ್ರತಿಪಾದಿಸಿದರು.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಪಣ ತೊಟ್ಟಿದೆ. ಹಿಂದುತ್ವ ಉಳಿಸಿ ಬೆಳೆಸುವ ಅಗತ್ಯದ ಬಗ್ಗೆ ಬಿಜೆಪಿ ಪಕ್ಷದವರು ಹಲವು ಬಾರಿ ನೇರವಾಗಿಯೇ ಹೇಳಿದ್ದಾರೆ. ಇದು ಸಿನಿಕತನದ ಚಿಂತನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry