ಹಳಿ ತಪ್ಪಿದ ಗೂಡ್ಸ್ ರೈಲು

7
ಪಂಜಾಬ್‌ನಿಂದ ಮದ್ದೂರಿಗೆ ಅಕ್ಕಿ ಸಾಗಿಸುತ್ತಿದ್ದಾಗ ಘಟನೆ

ಹಳಿ ತಪ್ಪಿದ ಗೂಡ್ಸ್ ರೈಲು

Published:
Updated:
ಹಳಿ ತಪ್ಪಿದ ಗೂಡ್ಸ್ ರೈಲು

ಪಡುಬಿದ್ರಿ: ನಂದಿಕೂರು ರೈಲು ನಿಲ್ದಾಣ ದಲ್ಲಿ ಭಾನುವಾರ ಸರಕು ಸಾಗಿಸುವ ರೈಲೊಂದು ಹಳಿ ತಪ್ಪಿದರೂ, ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.

ಪಂಜಾಬ್‌ನಿಂದ ಮದ್ದೂರಿಗೆ ಅಕ್ಕಿ ಸಾಗಿಸುತ್ತಿದ್ದ 50 ಬೋಗಿಗಳಿದ್ದ ಗೂಡ್ಸ್ ರೈಲು ನಂದಿಕೂರು ರೈಲು ನಿಲ್ದಾಣದಲ್ಲಿ ಎಂಜಿನ್ ಜೋಡಿಸುವ ವೇಳೆ ಹಳಿ ತಪ್ಪಿತ್ತು. ಘಟನೆಯಿಂದ ಎರಡು ಬೋಗಿ ಹಾಗೂ ಎಂಜಿನ್ ಹಳಿ ತಪ್ಪಿದವು.

ಎಂಜಿನ್ ಜೋಡಿಸುವ ವೇಳೆ ಮುಂಭಾಗದ ಎರಡು ಬೋಗಿಗಳು ಹಾಗೂ ಎಂಜಿನ್ ಹಳಿಯಿಂದ ಕೆಳಗಿಳಿದಿರುವುದು ಗೊತ್ತಾಗಿದೆ. ಹಳಿಗಳು ಸಂದಿಸುವ ಸ್ಥಳವಾಗಿದ್ದರಿಂದ ಈ ರೀತಿಯಾಗಿದೆ ಎಂದು ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಅವರು ಮಾಹಿತಿ ನೀಡಿದ್ದಾರೆ.

ಕೊಂಕಣ ರೈಲ್ವೆಯ ಮಂಗಳೂರು ಹಾಗೂ ಉಡುಪಿ ವಿಭಾಗದ ತಾಂತ್ರಿಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತೆರಳಿ ಹಳಿ ಸರಿಪಡಿಸುವ ಕಾರ್ಯ ಮಾಡಿದರು. 10 ಗಂಟೆ ಕಾರ್ಯಾಚರಣೆ ಬಳಿಕ ಸಂಜೆ 7 ಗಂಟೆಗೆ ರೈಲು ತೆರಳಿತು. ಇಲ್ಲಿ ಎರಡು ಪ್ರತ್ಯೇಕ ಹಳಿಗಳಿರುವ ಕಾರಣ ಇತರ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಮತ್ತೊಂದು ಹಳಿಯಲ್ಲಿ ಎಲ್ಲ ರೈಲುಗಳು ಸುಗಮವಾಗಿ ಸಾಗಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry