ಯಶವಂತಪುರ ಸಿಂಗಪುರ ಆಗಲಾರದು: ಟೀಕೆ

7

ಯಶವಂತಪುರ ಸಿಂಗಪುರ ಆಗಲಾರದು: ಟೀಕೆ

Published:
Updated:
ಯಶವಂತಪುರ ಸಿಂಗಪುರ ಆಗಲಾರದು: ಟೀಕೆ

ಬೆಂಗಳೂರು: ‘ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರೇ ಮುಖ್ಯಮಂತ್ರಿಯಾದರೂ ಯಶವಂತಪುರವನ್ನು ಸಿಂಗಪುರ ಮಾಡಲು ಸಾಧ್ಯವಿಲ್ಲ’ ಎಂದು ಯಲಹಂಕದ ಜೆಡಿಎಸ್‌ ಮುಖಂಡ ಹನುಮಂತೇಗೌಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದಲ್ಲಿ ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಸರ್ಕಾರ ರಚನೆಯಾಗಿದೆ. ಎರಡೂ ಪಕ್ಷಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ. ನಮ್ಮ ಮಾತು, ಹೇಳಿಕೆಗಳು ಸರ್ಕಾರ ನಡೆಸಿಕೊಂಡು ಹೋಗುವುದಕ್ಕೆ ಅನುಕೂಲಕರವಾಗಿ ಇರಬೇಕು. ಅದು ಬಿಟ್ಟು ಬೇಕಾಬಿಟ್ಟಿ ಮಾತನಾಡುವುದನ್ನು ಸೋಮಶೇಖರ್ ಬಿಡಲಿ’ ಎಂದು ಅವರು ಖಾರವಾಗಿ ನುಡಿದರು.

‘ಯಶವಂತಪುರದಲ್ಲಿನ ಐದು ಕಸ ಸಂಸ್ಕರಣಾ ಘಟಕಗಳನ್ನು ಸ್ಥಗಿತಗೊಳಿಸುವಂತೆ ಆಯುಕ್ತರಿಗೆ ಸೋಮಶೇಖರ್ ಪತ್ರ ಬರೆದಿದ್ದರು. ಜನರ ಹಿತಾಸಕ್ತಿಗಾಗಿ ಕಸ ಸಂಸ್ಕರಣಾ ಘಟಕವನ್ನು ಸ್ಥಗಿತಗೊಳಿಸಲು ಮತ್ತೆ ಆಯುಕ್ತರಿಗೆ ಪತ್ರ ಬರೆಯಲಿ. ಅದು ಬಿಟ್ಟು ಕುಮಾರಸ್ವಾಮಿ ಯಶವಂತಪುರವನ್ನು ಸಿಂಗಪುರ ಮಾಡಲಿ ಎಂದು ಉದ್ಧಟತನದ ಹೇಳಿಕೆಯನ್ನು ಕೊಡುವುದು ಬಿಡಬೇಕು’ ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry