ಭಗವದ್ಗೀತೆಯ ನೈಜ ಚಿತ್ರಣವೇ ಇಲ್ಲ: ಜಿ.ಆರ್‌.ರಾಮಕೃಷ್ಣ ಬೇಸರ

7

ಭಗವದ್ಗೀತೆಯ ನೈಜ ಚಿತ್ರಣವೇ ಇಲ್ಲ: ಜಿ.ಆರ್‌.ರಾಮಕೃಷ್ಣ ಬೇಸರ

Published:
Updated:
ಭಗವದ್ಗೀತೆಯ ನೈಜ ಚಿತ್ರಣವೇ ಇಲ್ಲ: ಜಿ.ಆರ್‌.ರಾಮಕೃಷ್ಣ ಬೇಸರ

ಬೆಂಗಳೂರು: ‘‌ಭಗವದ್ಗೀತೆಯನ್ನು ಕನ್ನಡದಲ್ಲಿ ರಚಿಸುವಾಗ ಕೃತಿಯಲ್ಲಿನ ನೈಜ ಚಿತ್ರಣವನ್ನೇ ಮರೆ ಮಾಚಲಾಗಿದೆ’ ಎಂದು ಲೇಖಕ ಡಾ.ಜಿ.ರಾಮಕೃಷ್ಣ ಬೇಸರ ವ್ಯಕ್ತಪಡಿಸಿದರು.

ನವಕರ್ನಾಟಕ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಭಗವದ್ಗೀತೆ ಒಂದು ಅವಲೋಕನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡದ ಕೃತಿಯಲ್ಲಿ ನಮ್ಮ ದೇಶದ ಇತಿಹಾಸ ಮತ್ತು ಪರಂಪರೆಯನ್ನು ಸಂಪೂರ್ಣವಾಗಿ ತಿಳಿಸಿಕೊಟ್ಟಿಲ್ಲ. ಅದನ್ನು ಓದಿದವರು ಆ ಬಗ್ಗೆ ಪ್ರಶ್ನೆ ಮಾಡುವುದು ಸಹಜ. ‘ಭಗವದ್ಗೀತೆ ಸರಿ ಇದೆ’ ಎಂದು ಒಪ್ಪಿಕೊಳ್ಳುವವರು ಅದನ್ನು ಓದಿಲ್ಲ ಎಂದರ್ಥ. ಪ್ರಶ್ನೆ ಮಾಡಿದವರ ವಿರುದ್ಧ ತಿರುಗಿ ಬೀಳುವವರು ಇರುವಂಥ ಕೆಟ್ಟ ಸಮಾಜದಲ್ಲಿ ನಾವಿದ್ದೇವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಲೇಖಕ ಸಿ.ಆರ್.ಕೃಷ್ಣರಾವ್ ಮಾತನಾಡಿ, ‘ಭಗವದ್ಗೀತೆ ಕುರಿತು ನೂರಾರು ವಿದ್ವಾಂಸರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ, ಡಾ.ಜಿ.ರಾಮೃಕೃಷ್ಣ ಅವರು ಕೃತಿಯನ್ನು ವಿಮರ್ಶಿಸದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಪ್ರಸ್ತುತ ಸಮಾಜದ ಬಗ್ಗೆ ಸುಲಲಿತವಾಗಿ ವಿಶ್ಲೇಷಿಸಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry