5

ಕ್ರಿಕೆಟ್ ಗಲಾಟೆ ಕೊಲೆಯಲ್ಲಿ ಅಂತ್ಯ

Published:
Updated:

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ ಬಳಿಯ ಜೆ.ಸಿ.ನಗರದಲ್ಲಿ ಕ್ರಿಕೆಟ್‌ ವಿಚಾರವಾಗಿ ನಡೆದ ಗಲಾಟೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳೀಯ ಶ್ರೀರಾಮನಗರದ ನಿವಾಸಿ ಮಣಿಕಂಠ ಅಲಿಯಾಸ್ ದೊಡ್ಡಕಾಟು (22) ಕೊಲೆಯಾದವರು.

ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಮಣಿಕಂಠ್, ತಮ್ಮ ಸ್ನೇಹಿತರ ಜತೆಯಲ್ಲಿ ಕ್ರಿಕೆಟ್ ಆಡಲು ಗೆಳೆಯರ ಬಳಗ ಕ್ರೀಡಾಂಗಣಕ್ಕೆ ಹೋಗಿದ್ದರು. ಕ್ರಿಕೆಟ್‌ ಪಂದ್ಯದ ವೇಳೆಯಲ್ಲಿ ಯುವಕನೊಬ್ಬನ ಜತೆ ಜಗಳ ತೆಗೆದಿದ್ದ ಅವರು, ಆತನ ಮೇಲೆ ಹಲ್ಲೆ ಮಾಡಿ ಕ್ರೀಡಾಂಗಣದಿಂದ ವಾಪಸ್‌ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಹಲ್ಲೆಗೀಡಾಗಿದ್ದ ಯುವಕ, ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದ. ಸಂಜೆ 6 ಗಂಟೆ ಸುಮಾರಿಗೆ ಕ್ರೀಡಾಂಗಣಕ್ಕೆ ಬಂದಿದ್ದ ಆ ಯುವಕ ಹಾಗೂ ಆತನ ಸ್ನೇಹಿತರು, ಮಾರಕಾಸ್ತ್ರಗಳಿಂದ ಮಣಿಕಂಠ್‌ಗೆ ಹೊಡೆದಿದ್ದರು. ತೀವ್ರವಾಗಿ ಗಾಯಗೊಂಡ ಮಣಿಕಂಠ್, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದರು.

‘ಮೃತ ಮಣಿಕಂಠ್‌, ದರೋಡೆ ಪ್ರಕರಣವೊಂದರ ಆರೋಪಿ. ಅವರ ಕೊಲೆ ಸಂಬಂಧ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry