ಮಕ್ಕಳ ಉಲ್ಲಾಸಕ್ಕೆ ಪಾರವೇ ಇರಲಿಲ್ಲ. ಎರಡು ದಿನ ರಜೆ ಸಿಕ್ಕಿದ್ದರಿಂದ ಸಹಜವಾಗಿ ಮಕ್ಕಳ ಖುಷಿ ಇಮ್ಮಡಿಯಾಗಿತ್ತು. ಕುಟುಂಬದೊಂದಿಗೆ ಉದ್ಯಾನಕ್ಕೆ ಬಂದ ಪುಳಕದಲ್ಲೇ ಚಿಣ್ಣರೆಲ್ಲ ಕಾಲ ಕಳೆದರು. ಹುಲ್ಲಿನ ಮೇಲೆ ಪಾದರಸದಂತೆ ಓಡಾಡಿ, ಹಾಡು ಹಾಡಿ, ಆಟವಾಡಿ, ಮಿಮಿಕ್ರಿ ಮಾಡಿ... ಪಾಲಕರನ್ನು ರಂಜಿಸಿದರು. ಪುಟಾಣಿ ಪುಟಾಣಿ ಜೋಕುಗಳನ್ನು ಹೇಳಿ ನಕ್ಕು–ನಗಿಸಿದರು. ಉಯ್ಯಾಲೆ, ಸೀಸಾ, ಗಿರಿಗಿಟ್ಲೆ, ಜಾರುಬಂಡಿಗಳ ಮೇಲೆ ಮಕ್ಕಳ ಮನದಣಿಯೆ ಕುಣಿದಾಡಿದರು.