ಮಲ್ಲಮ್ಮ ತತ್ವ, ಆದರ್ಶ ಪಾಲನೆಗೆ ಸಲಹೆ

7
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ

ಮಲ್ಲಮ್ಮ ತತ್ವ, ಆದರ್ಶ ಪಾಲನೆಗೆ ಸಲಹೆ

Published:
Updated:

ಹಟ್ಟಿ ಚಿನ್ನದ ಗಣಿ: ರಡ್ಡಿ ಸಮಾಜ ಮತ್ತು ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜನಕಲ್ಯಾಣ ಟ್ರಸ್ಟ್‌ ವತಿಯಿಂದ ಭಾನುವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ನಡೆಯಿತು.

ಪ್ರಮುಖರಾದ ಕೃಷ್ಣಾನಂದ ಶಾಸ್ತ್ರಿ ಕಜ್ಜಿಡೋಣಿ ಮಾತನಾಡಿ, ‘ಐಕ್ಯತೆಯಲ್ಲಿ ಬಲವಿದೆ. ಒಗ್ಗಟ್ಟಾಗಿ ಸಮಾಜದ ಏಳಿಗಾಗಿ ಎಲ್ಲರೂ ಸಹಕರಿಸಬೇಕು. ಹೇಮರಡ್ಡಿ ಮಲ್ಲಮ್ಮ ಅವರ ತತ್ವ, ಆದರ್ಶ ಪಾಲಿಸಬೇಕು’ ಎಂದರು.

ಮಲ್ಲಮ್ಮನ ಜೀವನ ಚರಿತ್ರೆ ಕುರಿತು ಸುಮಂಗಲ ರಡ್ಡಿ ಉಪನ್ಯಾಸ ನೀಡಿದರು. ವೇಮನಾನಂದ ಪುರ ಸ್ವಾಮಿ ಹರಿಹರ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೆಡಗಿಮುದ್ರಾ, ಬೂದಿಬಸವ ಸ್ವಾಮೀಜಿ ಗಬ್ಬೂರು,ಗಜದಂಡ ಸ್ವಾಮೀಜಿ ದೇವರ ಭೂಪುರ, ಮುರಗೇಂದ್ರ ಸ್ವಾಮೀಜಿ ಯರಡೋಣ ಕ್ರಾಸ್‌, ಶರಣ್ಯ ಸ್ವಾಮಿ ಹಿರೇಮಠ ಸ್ವಾಮೀಜಿ ಹುನಕುಂಟಿ ಸಾನಿಧ್ಯ ವಹಿಸಿಕೊಂಡಿದ್ದರು. ಬಸವ ಪ್ರಸಾದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆದವು

ಸಚಿವ ವೆಂಕಟ್‌ರಾವ್ ನಾಡಗೌಡ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರನ್ನು ಸನ್ಮಾನಿಸಲಾಯಿತು.  ಮುಖಂಡರಾದ ಬಸವರಾಜ ಪಾಟೀಲ ಆನ್ವರಿ, ಸಿದ್ದು ವೈಬಂದಿ, ಲಿಂಗರಾಜ ಭೂಪಾಲ ಗೆಜ್ಜಲಗಟ್ಟಾ, ಗಿರಿಮಲ್ಲನಗೌಡ, ಶಂಕರಗೌಡ ಬಳಗಾನೂರು, ಅಮರೇಗೌಡ ಈಚನಾಳ, ಪಾಮಯ್ಯ ಮುರಾರಿ, ವಿಜಯಕುಮಾರ ಸಾಹುಕಾರ, ವಿಜಯ ರಡ್ಡಿ ಹಾಗೂ ರಡ್ಡಿ ಸಮಾದ ಹಟ್ಟಿ ಘಟಕದ ಪದಾಧಿಕಾರಿಗಳು ಇದ್ದರು.

ಹೇಮರಡ್ಡಿ ಮಲ್ಲಮ್ಮ ಭಾವಚಿತ್ರದ ಮೆರವಣಿಗೆ ಹಟ್ಟಿ ಗ್ರಾಮ ಬಸವಣ್ಣ ಗುಡಿಯಿಂದ ಹಟ್ಟಿ ಕ್ಯಾಂಪ್‌ವರೆಗೆ ನಡೆದ ಮೆರವಣಿಗೆ ಬಾಜಾ ಭಜಂತ್ರಿ ಹಾಗೂ ಡೊಳ್ಳು ಕುಣಿತ, ಕುಂಭ ಕಳಸದೊಂದಿಗೆ ಅದ್ಧೂರಿಯಾಗಿ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry