ಜಯಮಾಲಾ ಯಾವ ಸೇವೆ ಎಂದು ತಿಳಿದರೊ ಗೊತ್ತಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

7
‘ನಾನು ಪಕ್ಷದ ಶಿಸ್ತಿನ ಸಿಪಾಯಿ’

ಜಯಮಾಲಾ ಯಾವ ಸೇವೆ ಎಂದು ತಿಳಿದರೊ ಗೊತ್ತಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Published:
Updated:
ಜಯಮಾಲಾ ಯಾವ ಸೇವೆ ಎಂದು ತಿಳಿದರೊ ಗೊತ್ತಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: 'ಜಯಮಾಲಾ ಅವರು ಹೊಟ್ಟೆಕಿಚ್ಚಿಗೆ ಮದ್ದಿಲ್ಲಾ ಎಂದಿದ್ದಾರೆ. ಅದು ಜಗತ್ತಿಗೆ ಗೊತ್ತಿರುವ ವಿಚಾರ. ನನಗೇನು ಹೊಟ್ಟೆಕಿಚ್ಚಿಲ್ಲ’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದರು.

ಜಯಮಾಲಾ ಅವರ ಸೇವೆ ನಾಯಕರುಗಳಿಗೆ ಇಷ್ಟ ಆಗಿ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ ಎಂಬ ಹೇಳಿಕೆ ವಿಚಾರ, ‘ನಾನು ನಮ್ಮ ಕಡೆ ಮಾತನಾಡುವ ಸೇವೆಯ ಬಗ್ಗೆ ಹೇಳಿದ್ದೆ. ಅವರು ಯಾವ ಸೇವೆ ಎಂದು ತಿಳಿದರೊ ಗೊತ್ತಿಲ್ಲ. ಸೇವೆಯಲ್ಲಿ ಉರುಳು ಸೇವೆ, ದೇವರ ಸೇವೆ, ಅಭಿಷೇಕ ಸೇವೆ ಎಲ್ಲವು ಇದೆ’ ಎಂದರು.

‘ಸಚಿವ ಸ್ಥಾನದ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಸಚಿವ ಸ್ಥಾನ ಕೊಟ್ಟರೂ ಸಂತೋಷ, ಇಲ್ಲವಾದರೂ ಬೇಸರವಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪ್ರಸ್ತುತದಲ್ಲಿ ನಂಬಿಕೆ ಇಟ್ಟವಳು. ನಾಳೆ–ನಾಡಿದ್ದು ಎಂಬುದರಲ್ಲಿ ನಂಬಿಕೆ ಇಲ್ಲ’  ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry