ಭಾನುವಾರ, ಡಿಸೆಂಬರ್ 8, 2019
22 °C

ಮದ್ಯ ಕಂಪೆನಿ ಪ್ರಾಯೋಜಿತ ಪ್ರಶಸ್ತಿ ನಿರಾಕರಿಸಿದ ಈಜಿಪ್ಟ್ ಫುಟ್‍ಬಾಲ್ ತಂಡದ ಗೋಲ್ ಕೀಪರ್

Published:
Updated:
ಮದ್ಯ ಕಂಪೆನಿ ಪ್ರಾಯೋಜಿತ ಪ್ರಶಸ್ತಿ ನಿರಾಕರಿಸಿದ ಈಜಿಪ್ಟ್ ಫುಟ್‍ಬಾಲ್ ತಂಡದ ಗೋಲ್ ಕೀಪರ್

ಮಾಸ್ಕೊ: 21ನೇ ವಿಶ್ವಕಪ್ ಫುಟ್‍ಬಾಲ್ ಟೂರ್ನಿಯಲ್ಲಿ ಉರುಗ್ವೇ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನಾಗಿ ಆಯ್ಕೆಯಾದ ಈಜಿಪ್ಟ್ ಗೋಲ್ ಕೀಪರ್ ಮುಹಮ್ಮದ್ ಎಲ್ಶೆನಾವಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ಅಮೆರಿಕನ್ ಬಿಯರ್ ಕಂಪೆನಿಯಾದ ಬಡ್‍ವೈಜರ್ ಪ್ರಾಯೋಜಿತ ಪ್ರಶಸ್ತಿ ಇದಾಗಿದ್ದರಿಂದ ತಮ್ಮ ತಂಡದ ಯಾವೊಬ್ಬ ಸದಸ್ಯನೂ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಈಜಿಪ್ಟ್ ಟೀಂ ನಿರ್ದೇಶಕ ಇಹಾಬ್ ಲೆಹತಾ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಉರುಗ್ವೇ ವಿರುದ್ಧ ಒಂದು ಗೋಲ್‍ಗೆ ಈಜಿಪ್ಟ್ ಪರಾಭವಗೊಂಡಿದ್ದರೂ ಉತ್ತಮ ಸೇವ್ ಮೂಲಕ ಈಜಿಪ್ಟ್ ತಂಡ ಹೀನಾಯವಾಗಿ ಸೋಲುವುದನ್ನು ತಪ್ಪಿಸಿದ್ದು ಇದೇ ಎಲ್ಶೆನಾವಿ. ಹಾಗಾಗಿ ಅವರು ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಪ್ರತಿಕ್ರಿಯಿಸಿ (+)