ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಮೊದಲ ಸಂಚಾರಿ ಗ್ರಂಥಾಲಯ

Last Updated 18 ಜೂನ್ 2018, 13:43 IST
ಅಕ್ಷರ ಗಾತ್ರ

ನೀಲಿ ಬಸ್‌ನ ಬಾಗಿಲುಗಳು ತೆರೆಯುತ್ತಿದ್ದಂತೆ ಮಕ್ಕಳು ಕುತೂಹಲದಿಂದ ಬಸ್‌ ಏರಿ ಪುಸ್ತಕಗಳನ್ನು ಮುಟ್ಟಿ, ಓದಿ ಸಂಭ್ರಮಿಸಿದರು.

ಅಫ್ಗಾನಿಸ್ತಾನದ ಮೊದಲ ಸಂಚಾರಿ ಗ್ರಂಥಾಲಯ ‘ಚಾರ್ಮಾಗ್‌’ ಕಾಬೂಲ್‌ನಿಂದ ಹೊರಟು ಇಲ್ಲಿನ ದೂಳಿನ ಬೀದಿಗಳಲ್ಲಿ, ಬಿರುಗಾಳಿಯ ನಡುವೆ ಸಂಚರಿಸಿತು. ಸರ್ಕಾರಿ ಸಾರಿಗೆ ಕಂಪೆನಿಯ ಬಸ್‌ ಅನ್ನೇ ಬಾಡಿಗೆಗೆ ಪಡೆದು ಗ್ರಂಥಾಲಯವನ್ನಾಗಿ ಪರಿವರ್ತಿಸಲಾಗಿದೆ.

ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪೂರೈಕೆ ಕಡಿಮೆ ಇರುವ ಪುಸ್ತಕಗಳನ್ನು ಈ ಸಂಚಾರಿ ಗ್ರಂಥಾಲಯ ಹೊಂದಿದ್ದು ಬೀದಿ ಮಕ್ಕಳಿಗೆ ಉಚಿತ ಪ್ರವೇಶ ಅವಕಾಶ ನೀಡಲಾಗಿದೆ.

ಇಲ್ಲಿ ಆಗಾಗ ತಾಲಿಬಾನ್‌ ಮತ್ತು ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ದಾಳಿಯ ಭಯದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಪೋಷಕರು ಹೆದರುತ್ತಾರೆ. ದಾಳಿಯ ಕಾರಣದಿಂದ ಈಗಲೂ ಕಾಬೂಲ್‌ನ ಬೀದಿಗಳಲ್ಲಿ ಜನರು ಹೆಚ್ಚು ಓಡಾಡುತ್ತಿಲ್ಲ. ಬಾಗಿಲು ಮುಚ್ಚಿದ ಮನೆಯೊಳಗೆ ಮಕ್ಕಳ ಜೊತೆ ಭಯದಿಂದಲೇ ಬದುಕುತ್ತಿದ್ದಾರೆ. ಅನೇಕ ಕುಟುಂಬಗಳು ಹಿಂದೆ ನಡೆದ ದಾಳಿಗಳಿಂದ ಆಘಾತಕ್ಕೊಳಗಾಗಿದ್ದಾರೆ. ಹಾಗಾಗಿ ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಬಿಡುತ್ತಿಲ್ಲ. ಆದರೆ, ಸಂಚಾರಿ ಗ್ರಂಥಾಲಯವು ಚೆಸ್‌ ಆಡಲು, ಸ್ನೇಹಿತರನ್ನು ಭೇಟಿಯಾಗಲು ಮತ್ತು ಪುಸ್ತಕಗಳನ್ನು ಓದಲು ಸೂಕ್ತ ಸ್ಥಳವಾಗಿದೆ.

ಉಗ್ರರ ದಾಳಿಯ ಭಯದಿಂದಾಗಿಯೇ ಈ ಬಸ್‌ ಸರ್ಕಾರಿ ಕಟ್ಟಡಗಳು, ಜನನಿಬಿಡ ಬೀದಿ ಮತ್ತು ಮುಖ್ಯರಸ್ತೆಗಳನ್ನು ಹೊರತುಪಡಿಸಿ ಸಂಚರಿಸಲಿದೆ. ಈಗಾಗಲೇ ಪ್ರತಿದಿನ ಸುಮಾರು 300 ಮಕ್ಕಳು ಗ್ರಂಥಾಲಯ ಬಳಸುತ್ತಿದ್ದಾರೆ. ಹೆಣ್ಣುಮಕ್ಕಳು ಬಸ್‌ನ ಮುಂಭಾಗದಲ್ಲಿ ಮತ್ತು ಗಂಡು ಮಕ್ಕಳು ಹಿಂಭಾಗದಲ್ಲಿ ಕುಳಿತು ಓದುವ ವ್ಯವಸ್ಥೆ ಮಾಡಲಾಗಿದೆ. ಮೂವರು ಸ್ವಯಂಸೇವಕರು ಮಕ್ಕಳಿಗೆ ಎತ್ತರದ ಶೆಲ್ಫ್‌ಗಳಿಂದ ಪುಸ್ತಕ ತೆಗೆಯಲು ಸಹಕರಿಸುತ್ತಿದ್ದಾರೆ.

ಬಸ್‌ನ ಒಳಗೆ ನೆಲದ ಮೇಲೆ ಕಾರ್ಪೆಟ್‌ಗಳನ್ನು ಹಾಕಲಾಗಿದೆ. ಅಲ್ಲಿ ಕುಳಿತು ಓದಬಹುದು. ಡೆಸ್ಕ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಫ್ಘಾನಿಸ್ತಾನದ ಪ್ರಕಾಶಕರು ಸುಮಾರು 600ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಚಾರಿ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT